ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಕಂಪನಿಯಲ್ಲಿ ರಾತ್ರಿ ಪಾಳಿ ಮುಗಿಸಿ ಮಧ್ಯರಾತ್ರಿ ಮೂರು ಗಂಟೆ ೩೦ ನಿಮಿಷಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದುಕೊಂಡು ಮೃತಪಟ್ಟಿರುತ್ತಾನೆ. ಅಕ್ಷಯ್(೨೭) ಎಂಬ ಯುವಕ ಮೃತಪಟ್ಟಿರುವ ದುರ್ದೈವಿ. ಹೊಂಗಸಂದ್ರದ ಮೆಟ್ರೋ ಸ್ಟೇಷನ್ ಬಳಿ ಅಪಘಾತ ಕೀಡಾಗಿ ಮೃತಪಟ್ಟಿದ್ದು, ಮಡಿವಾಳ ಸಂಚಾರ ಪೊಲೀಸರು ಅಪಘಾತ ಪ್ರಕರಣ ದಾಖಲು ಮಾಡಿಕೊಂಡು ಗೂಡ್ಸು ವಾಹನದ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.



