ಹೊಸಕೋಟೆ: ಸ್ವಾತಂತ್ರ್ಯ ನಂತರದ ದಿನಗಳಿಂದ ದೇಶದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿರುವ ರಾಜಕೀಯ ಪಕ್ಷಗಳ ಆಡಳಿತದಲ್ಲಿ ದಲಿತರ ಪಾತ್ರ ಅಗತ್ಯವಾಗಿದೆ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ತಿಳಿಸಿದರು.ಅವರು ನಗರದ ಅಂಬೇಡ್ಕರ್ ಭವನದಲ್ಲಿ ಭೀಮ ಕೊರೆಗಾವ್ ವಿಜಯೋತ್ಸವ ಅಂಗವಾಗಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಸನ್ನು ಒಳಗೊಂಡಂತೆ ಇತರೆ ರಾಜ್ಯಗಳಲ್ಲಿ ಅಧಿಕಾರ ದಲ್ಲಿರುವ ರಾಜಕೀಯ ಪಕ್ಷಗಳ ಎಲ್ಲವೂ ಕೂಡ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಲ್ಲಿ ದಲಿತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ ಪ್ರಸ್ತುತ ಸನ್ನಿವೇಶಗಳಲ್ಲಿ ದಲಿತ ಪರವಾಗಿ ಧ್ವನಿ ಎತ್ತುವವರು ಯಾರು ಇಲ್ಲದಂತಾಗಿದೆ. ಆದ್ದರಿಂದ ದಲಿತರು ಕೂಡ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಪ್ರತಿ ಮನೆ ಮನೆಯಲ್ಲಿ ಅಂಬೇಡ್ಕರ್ರಂತಹ ಮಹಾನ್ ವ್ಯಕ್ತಿಗಳು ಅವರು ಹುಟ್ಟಿ ಬರಬೇಕು ಎಂದರು.
ಸಂಘ ಸಂಸ್ಥೆಗಳು ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರವಲ್ಲದೆ ಜನಾಂಗದಲ್ಲಿ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಶ್ರಮಿಸಬೇಕು. ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಂಡು ಸರ್ವತೋಮುಖ ಬೆಳವಣಿಗೆ ಹೊಂದಲು ಮಾರ್ಗದರ್ಶನ ನೀಡುವಲ್ಲಿ ಜವಾಬ್ದಾರಿಯುತ ಪಾತ್ರ ನಿರ್ವಹಿಸ ಬೇಕಾದ್ದು ಅತ್ಯವಶ್ಯವಾಗಿದೆ ಎಂದರು.
ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸಿದ್ದರಾಜು ಮಾತನಾಡಿ ಪ್ರಸ್ತುತ ಸಮಾಜದಲ್ಲಿ ದಲಿತರು ಅಗತ್ಯವಾದ ಅಂತಹ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಅಭಿವೃದ್ಧಿಯಾಗಬೇಕಾದರೆ ಒಗ್ಗಟ್ಟಿನ ಮಂತ್ರ ಜಪಿಸುವಂತಾಗಬೇಕು. ಎಲ್ಲಾ ಸಂಘಟನೆಗಳ ಮುಖಂಡರು ಒಗ್ಗೂಡುವುದರ ಮೂಲಕ ಅಂಬೇಡ್ಕರ್ ಅವರ ಒಂದು ಸಿದ್ಧಾಂತಗಳನ್ನ ಪ್ರತಿಪಾದಿಸಿ ನಮ್ಮ ಸಮುದಾಯದ ಅಭಿವೃದ್ಧಿಗೆ ನಾವೇ ಸಂಕಲ್ಪ ತೊಡಬೇಕು ಎಂದರು.
ಭೀಮಾ ಕೋರೆಗಾವ್ ವಿಜಯೋತ್ಸವ ವಿಚಾರ ಸಂಕೀರ್ಣಕ್ಕೆ ಆಗಮಿಸಿದಂತಹ ಸಂಪನ್ಮೂಲ ವ್ಯಕ್ತಿಗಳಾದ ಧರ್ಮಪ್ರಿಯ ಜನಾರ್ಧನ್ ಹಾಗೂ ಜನನಾಗಪ್ಪ ಅವರು ಸುಮಾರು 2 ಗಂಟೆಗಳ ಕಾಲ ವಿಚಾರವನ್ನು ಮಂಡಿಸಿದರು.ಈ ಸಂದರ್ಭದಲ್ಲಿ ದಲಿತ ಮುಖಂಡರು ಗಳಾದಂತಹ ಎಚ್.ಎಂ.ಸುಬ್ಬರಾಜ್, ಗುಟ್ಟಹಳ್ಳಿ ನಾಗರಾಜ್, ಶಿವಾನಂದ್ ಯೇಸುಕ್ರಿಷ್ಣ, ನಾರಾಯಣಸ್ವಾಮಿ, ವಿಜಯಕುಮಾರ್, ಐ.ಆರ್. ನಾರಾಯಣಸ್ವಾಮಿ, ಚಿನ್ನಸ್ವಾಮಿ, ಅಂಜನ್ ಬೌದ್ಧ, ದೊಡ್ಡಅರಳಿಗೆರೆ ನಾಗೇಶ್, ಕೊರಳೂರು ಶ್ರೀನಿವಾಸ್, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.ಇದೇ ಸಂದರ್ಭದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಮೆರವಣಿಗೆ ನಡೆಯಿತು.