ಚಿಂತಾಮಣಿ: ತಾಲೂಕಿನ ಕೈವಾರದ ಅಂಬೇಡ್ಕರ್ ಶಾಲೆಯಲ್ಲಿ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜಯಂತಿ ಅಂಗವಾಗಿ ರಾಷ್ಟ್ರೀ ಯ ಶಿಕ್ಷಣ ದಿನವನ್ನು ಆಚರಣೆ ಮಾಡಲಾಯಿತು. ಸಮಾಜ ಶಿಕ್ಷಕ ಉಮೇಶ್ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಶಿಕ್ಷಣವು ವಿಭಿನ್ನ ಹಿನ್ನೆಲೆಯ ಜನರನ್ನು ಒಗ್ಗೂಡಿಸುತ್ತದೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಭಾರತ ರತ್ನ ಮೌಲಾನ ಅಬ್ದುಲ್ ಕಲಾಂ ಆಜಾದ್ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು. ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು ಮತ್ತು ಮೊದಲ ಬಾರಿಗೆ ರಾಷ್ಟ್ರೀ ಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಂತಹ ಮಹಾನ್ ನಾಯಕ ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುರೇಶ ಮಾತನಾಡಿ ಅಜಾದ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಅಜರಾಮರವಾಗಿಸಲು ಭಾರತ ಸರ್ಕಾರ ೨೦೦೮ರಿಂದ ಪ್ರತಿ ವರ್ಷ ಅವರ ಜನ್ಮ ದಿನವಾದ ನವೆಂಬರ್ ೧೧ರಂದು ರಾಷ್ಟ್ರೀ ಯ ಶಿಕ್ಷಣ ದಿನವನ್ನು ಆಚರಿಸುತ್ತಾ ಬಂದಿದೆ. ಈ ದಿನವು ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು, ಶಿಕ್ಷಣದ ಗುಣಮಟ್ಟ ಸುಧಾರಿಸಲು ಮತ್ತು
ರಾಷ್ಟ್ರದ ಖ್ಯಾತಿಯನ್ನು ಹೆಚ್ಚಿಸಲು ಶಿಕ್ಷಣವು ಹೇಗೆ ಸಮಾಜವನ್ನು ಬೆಳೆಸಬಹುದು ಎಂಬುದರ ಬಗ್ಗೆ ರಾಷ್ಟೀಯ ಶಿಕ್ಷಣ ದಿನವು ಹೆಚ್ಚಿನ ಮಹತ್ವ ನೀಡುತ್ತದೆ ಎಂದು ಹೇಳಿದರು.
ಸಂಸ್ಥೆಯ ಮುಖ್ಯಸ್ಥೆ ಎಸ್ ಎಂ ರೋಜಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ವೆಂಕಟೇಶ್ ಬಾಬು, ಲೋಕೇಶಪ್ಪ, ರತ್ನ, ವಿವೇಕ್, ಧನುಷ್ ಕುಮಾರ, ಮಂಜುಳ, ಗೋಪಮ್ಮ, ಭಾಗ್ಯಮ್ಮಾ, ದಿವ್ಯ, ಯೋಗಮ್ಮ, ವೆಂಕಟರತ್ನಮ್ಮ, ಜ್ಞಾನೇಶ್ವರಿ, ಶ್ರೀಧರ್ ಹಿರೇಮಠ ಉಪಸ್ಥಿತರಿದ್ದರು.



