ದೇವನಹಳ್ಳಿ: ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳ ಜೊತೆಗೆ ಕಲಿಕೆಗೆ ಹೆಚ್ಚಿನ ಅನುಕೂಲವಾಗಲು ಬೇಸಿಗೆ ಶಿಬಿರಗಳ ಪಾತ್ರ ಹೆಚ್ಚು ಸಹಕಾರಿಯಾಗಿದೆ ಎಂದು ಸಾಹಿತಿ ಡಾಕ್ಟರ್ ನಂಗಲಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಜೆ ಸಿ ಐ ದೇವನಹಳ್ಳಿ ಸಂಸ್ಥೆ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 21ನೇ ವರ್ಷದ ಉಚಿತ ಬೇಸಿಗೆ ಶಿಬಿರ ಮತ್ತು ಪದವಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದೊಂದಿಗೆ ಪರಿಸರ ಮತ್ತು ಕ್ರೀಡೆಗಳನ್ನು ಹೆಚ್ಚಿಸಿ ಆಸಕ್ತಿ ಮೂಡಿಸಬೇಕು ಪ್ರತಿ ಮಕ್ಕಳಲ್ಲಿ ವ್ಯಕ್ತಿತ್ವ ವಿಕಾಸನವಾಗಬೇಕು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಭಾಗವಹಿಸಬೇಕು ಕ್ರೀಡೆಯಿಂದ ನಿಮ್ಮ ಸರ್ವೋತೋಮುಖ ಬೆಳವಣಿಗೆ ಸಾಧ್ಯವಿದೆ ನಿಮ್ಮ ಪ್ರತಿಭೆಗೆ ಇದೊಂದು ಸೂಕ್ತ ವೇದಿಕೆಯಾಗಿದೆ ಅವಕಾಶ ದೊರೆತಾಗ ಉನ್ನತ ಮಟ್ಟಕ್ಕೆ ಬರಬೇಕು ಪ್ರತಿ ಮಕ್ಕಳು ನೋಡಿ ಕಲಿಯಬೇಕು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ತಿಳಿಸಿದರು.
ಶಿವನಾಪುರ ರಮೇಶ್ ಮಾತನಾಡಿ. ಕಲಿಕೆಯ ಚಿಂತನೆಗಳನ್ನು ಮೂಡಿಸುವ ಮತ್ತು ಅವರಲ್ಲಿನ ಪ್ರತಿಭೆಗಳನ್ನು ಹೊರಹಾಕಲು ಇಂತಹ ಶಿಬಿರವು ಹೆಚ್ಚಿನ ಮಹತ್ವ ಹೊಂದಿದೆ ಬೇಸಿಗೆ ಶಿಬಿರದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲದೆ ಮನೋವಿಕಾಸ ಸಹ ಆಗುತ್ತದೆ. ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುತ್ತದೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುವುದು ಎಂದರು.
ಇದೇ ಸಂದರ್ಭದಲ್ಲಿ. ನೂತನ ಅಧ್ಯಕ್ಷರಾದ ಎಸ್ ವಿಜಯ್ ಕುಮಾರ್ ಅವರಿಗೆ ಡಾಕ್ಟರ್ ನಂಗಲಿ ಚಂದ್ರಶೇಖರ್ ಪದವಿ ವಚನ ಬೋಧನೆ ಮಾಡಿದರು,
ನಿಕಟ ಪೂರ್ವ ಅಧ್ಯಕ್ಷ ಪುಟ್ಟಸ್ವಾಮಿ, ಪೂರ್ವ ಅಧ್ಯಕ್ಷರಾದ ಶಶಿಧರ್, ಕೆಎಸ್ ಪ್ರಭಾಕರ್, ಸಿಎಂ ವೆಂಕಟೇಶ್, ಪುರಸಭೆ ಸದಸ್ಯರಾದ ಸಂಘದ ನಿರ್ದೇಶಕರಾದ ಜಿ ಎ ರವೀಂದ್ರ, ಎಸ್ ನಾಗೇಶ್. ಪ್ರಧಾನ ಕಾರ್ಯದರ್ಶಿ ಟಿ ಆರ್ ಲೋಕೇಶ್, ಜೆಸಿ ಅಧ್ಯಕ್ಷ ಕಿರಣ್ ಯಾದವ್, ಚಪ್ರಕಲ್ ಪೂರ್ವ ಅಧ್ಯಕ್ಷ ಶಿವಾಜಿ ಗೌಡ, ನರಗನಹಳ್ಳಿ ಶ್ರೀನಿವಾಸ್, ಮುನಿರಾಜು, ಉಪಸ್ಥಿತರಿದ್ದರು.