ಬೆಂಗಳೂರು: ನಾಳೆಯಿಂದ ವಿಧಾನಮಂಡಲದ ಉಭಯಸದನಗಳ ಕಲಾಪ ಆರಂಭವಾಗಲಿದ್ದು, ಆಡಳಿತ ವಿಪಕ್ಷಗಳ ಮಾತಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ.
ನಾಳೆ ಬೆಳಿಗ್ಗೆ ೧೧ ಗಂಟೆಗೆ ರಾಜ್ಯಪಾಲ ಥಾವರ್ಚಂದ್ ಗೆಲ್ಹೋಟ್ ಎರಡು ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಶುಕ್ರವಾರದಿಂದ ಕಲಾಪಗಳು ಆರಂಭವಾಗಲಿದ್ದು, ಆಡಳಿತ-ವಿಪಕ್ಷಗಳ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಕಲಾಪ ಸಜ್ಜಾಗಲಿದೆ.
ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿ ಕಚೇರಿಯಲ್ಲೇ ರಾಸಲೀಲೆ ನಡೆಸಿದ್ದಾರೆ ಎಂಬ ಆರೋಪ, ತಮ್ಮ ಕಚೇರಿಯಲ್ಲಿ ಅಬಕಾರಿ, ಡಿಸಿ೨೫ ಲಕ್ಷ ರೂ. ಲಂಚ ಪಡೆದ ಆರೋಪ, ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕಾಗಿ ನಡೆಯುತ್ತಿರುವ ಚರ್ಚೆ, ಬಳ್ಳಾರಿಯಲ್ಲಿ ಫೈರಿಂಗ್ ಪ್ರಕರಣ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊAಡು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ನವರು ಸಿದ್ಧತೆ ಮಾಡಿಕೊಂಡಿದ್ದಾರೆ.
ಮನರೇಗ ಹೆಸರನ್ನು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪ್ರಮುಖವಾಗಿ ಚರ್ಚೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ.
ಫೆಬ್ರವರಿಯ ಅಂತ್ಯದಲ್ಲಿ ನಡೆಯುತ್ತಿದ್ದ ವಿಧಾನಮಂಡಲ ಅಧಿವೇಶವನ್ನು ಈ ಬಾರಿ ತರಾತುರಿಯಲ್ಲಿ ಬೇಗನೆ ಆರಂಭಿಸಿರುವುದು ವಿಶೇಷವಾಗಿ ಚರ್ಚೆಗೆ ಬರಲಿದೆ.
ಕೋಗಿಲು ಬಡಾವಣೆಯಲ್ಲಿ ಅನಧಿಕೃತ ನಿವಾಸಿಗಳನ್ನು ಅಕ್ರಮವಾಗಿ ನೆಲಸಿದ್ದವರನ್ನು ಒಕ್ಕಲೆಬ್ಬಿಸಿ ಅವರಿಗೆ ತರಾತುರಿಯಲ್ಲಿ ನಿವೇಶನ ವಸತಿ ಕಲ್ಪಿಸಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಪಕ್ಷ ವಿಶೇಷವಾಗಿ ತರಾಟೆಗೆ ತೆಗೆದುಕೊಳ್ಳಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಂದ ಮೇಲೆ ಕಾಂಗ್ರೆಸ್ ಸುವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರ ನಿಷ್ಕಿçಯವಾಗಿದೆ ಎಂದು ಆರೋಪಿಸಿ ಹಲವು ನಿದರ್ಶನಗಳೊಂದಿಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳು ಸಜ್ಜಾಗಿವೆ.
ಒಟ್ಟಾರೆ ಈ ಬಾರಿ ಅಧಿವೇಶನ ಗಹನವಾದ ಚರ್ಚೆಗಿಂತ ಆಡಳಿತ ವಿಪಕ್ಷಗಳ ಮಾತಿನ ಸಮರಕ್ಕೆ ವೇದಿಕೆಯಾಗಲಿದೆ.
ಆಡಳಿತ-ವಿಪಕ್ಷಗಳ ವಾಕ್ಸಮರಕ್ಕೆ ಸಜ್ಜು, ನಾಳೆಯಿಂದ ವಿಧಾನಮಂಡಲದ ಅಧಿವೇಶನ ಆರಂಭ



