ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಹಲವು ಆಟಗಾರರು ತಮ್ಮ ಅದೃಷ್ಟ ಬದಲಿಸಿಕೊಂಡಿದ್ದಾರೆ. ಕೆಲ ಆಟಗಾರರು ಐಪಿಎಲ್ ಮೂಲಕವೇ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಟ್ಟರೆ, ಮತ್ತೆ ಕೆಲ ಆಟಗಾರರು ಕೋಟಿ ಮೊತ್ತ ಪಡೆಯುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ಹೀಗೆ ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಆಟಗಾರರ ಪಟ್ಟಿಗೆ ಹೊಸ ಸೇರ್ಪಡೆ ರಾಬಿನ್ ಮಿನ್ಝ್.
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಜಾರ್ಖಂಡ್ಗೆ ರಾಬಿನ್ ಮಿನ್ಝಿ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹೆಸರು ನೀಡಿದ್ದರು. ಅಲ್ಲದೇ, ಈ ಬಾರಿಯಾದರೂ ಹರಾಜಾದರೆ ಸಾಕು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಯುವ ಆಟಗಾರ ಈ ನಿರೀಕ್ಷೆ ಸುಳ್ಳಾಗಲಿಲ್ಲ.
ರಾಬಿನ್ ಮಿನ್ಝಿ ಹೆಸರು ಕೂಗುತ್ತಿದ್ದಂತೆ ಗುಜರಾತ್ ಟೈಟಾನ್ಸ್ ತಂಡವು ಖರೀದಿಗೆ ಆಸಕ್ತಿವಹಿಸಿತು.
ಇದರ ಬೆನ್ನಲ್ಲೇ ಸಿಎಸ್ಕೆ, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಿಡ್ಡಿಂಗ್ ನಡೆಸಿದ್ದವು. ಪರಿಣಾಮ 20 ಲಕ್ಷದಲ್ಲಿದ್ದ ರಾಬಿನ್ ಮಿನ್ಝ್ ಮೌಲ್ಯವು 3 ಕೋಟಿಯನ್ನು ದಾಟಿತು.ಅಂತಿಮವಾಗಿ ಗುಜರಾತ್ ಟೈಟಾನ್ಸ್ ತಂಡವು 3.6 ಕೋಟಿ ರೂ. ನೀಡುವ ಮೂಲಕ ಜಾರ್ಖಂಡ್ನ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಂತೆ ಈ ಬಾರಿ ರಾಬಿನ್ ಮಿನ್ಝಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಂದೆ ಸೆಕ್ಯುರಿಟಿ ಗಾರ್ಡ್: ರಾಬಿನ್ ಮಿನ್ಝ್ ಅವರ ತಂದೆ ನಿವೃತ್ತ ಸೇನಾಧಿಕಾರಿ. ಪ್ರಸ್ತುತ ರಾಂಚಿಯ ಮುಂಡಾ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮಗ ಐಪಿಎಲ್ನಂತಹ ದೊಡ್ಡ ಲೀಗ್ಗೆ ಆಯ್ಕೆಯಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.