ಮಂಡ್ಯ: ನಿತ್ಯದ ಕುಡಿತದ ಗಲಾಟೆಯಿಂದ ಬೇಸತ್ತು ತಾಯಿ ಮನೆ ಬಿಟ್ಟರೆ, ಅಮ್ಮ ಕಾಣೆಯಾದಳೆಂಬ ಆತಂಕದಲ್ಲಿ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಮಹದೇವಮ್ಮ (75) ಹಾಗೂ ಅವರ ಪುತ್ರ ಸುಭಾಷ್ (42) ಮೃತಪಟ್ಟ ದುರ್ದೆವಿಗಳು
ಮೃತ ಸುಭಾಷ್ ಕಳೆದ ಕೆಲವು ಸಮಯದಿಂದ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ. ಪ್ರತಿದಿನ ಕುಡಿದು ಬಂದು ಮನೆಯಲ್ಲಿ ತಾಯಿ ಮಹದೇವಮ್ಮ ಅವರೊಂದಿಗೆ ಜಗಳವಾಡುತ್ತಿದ್ದನು. ಮಗನ ಈ ವರ್ತನೆಯಿಂದ ತೀವ್ರವಾಗಿ ಮನನೊಂದಿದ್ದ ಮಹದೇವಮ್ಮ, ಕಳೆದ 15 ದಿನಗಳ ಹಿಂದೆ ಯಾರಿಗೂ ತಿಳಿಸದೆ ಮನೆಯಿಂದ ನಾಪತ್ತೆಯಾಗಿದ್ದರು.
ತಾಯಿ ಕಾಣೆಯಾಗಿದ್ದಕ್ಕೆ ಮಗ ಆತ್ಮಹತ್ಯೆ ಕೊಳೆತ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆ!



