ಪೀಣ್ಯ ದಾಸರಹಳ್ಳಿ: ಏಕಾಂಗಿಯಾಗಿ ಕುಳಿತಿರುವ ಕಾಗೆಯೊಂದು ಕೆಕ್ಕರಿಸಿ ನೋಡುವ ಚಿತ್ರಣವಿರುವ ರಾವೆನ್ ಸಿನಿಮಾದ ಪೋಸ್ಟರ್ ಶ್ರಾವಣದ ಮೊದಲ ವಾರದಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.ಈ ಚಿತ್ರದಲ್ಲಿ ಕಾಗೆಯೇ ನಾಯಕ ನಟ ಎನ್ನುವುದು ವಿಶೇಷ.ಇತ್ತೀಚಿನ ದಿನಗಳಲ್ಲಿ ಕಥಾವಸ್ತು ಪ್ರಧಾನವಾಗಿರುವ ಸಾಕಷ್ಟು ಚಿತ್ರಗಳು ನಮ್ಮಚಿತ್ರರಂಗದಲ್ಲಿ ಸದ್ದು ಮಾಡುತ್ತಿವೆ. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಯಲ್ಲಿ ನಾಯಿಯೇ ಪ್ರಮುಖ ಪಾತ್ರದಾರಿ.
ಬಿಡುಗಡೆಗೆ ತಯಾರಾಗಿರುವ ರಾಜ್ ಶೆಟ್ಟಿ ಅವರ ಟೋಬಿ ಯಲ್ಲಿ ಮೂಗುತಿ ಹಾಕಿರುವ ಟಗರಿನ ಪೋಸ್ಟ್ ರ್ ತುಂಬಾ ವೈರಲ್ ಆಗಿದೆ ಈಗ ಈ ಸಾಲಿಗೆ ರಾವೆನ್ ಸೆರ್ಪಡೆಯಾಗಿದೆ.ಪೋಸ್ಟ್ ರ್ ನಿಂದಲೆ ಗಮನ ಸೆಳೆದದ್ದು ಈ ಚಿತ್ರದ ಪ್ರಮುಖ ಪಾತ್ರದಾರಿ ರಾವೆನ್ ಎನ್ನುವ ಕಾಗೆ. ಪೂರ್ಣ ಕಥೆ ಕಾಗೆಯ ಮೇಲೆ ಹೆಣೆಯಲಾಗಿದೆ ಎನ್ನುವುದು ಚಿತ್ರತಂಡದ ಮಾಹಿತಿ.
ಕನ್ನಡ ಚಿತ್ರರಂಗದಲ್ಲಿ ಸಧಭಿರುಚಿಯ ಚಿತ್ರಗಳನ್ನು ತಯಾರು ಮಾಡಿರುವ ಪ್ರಬಿಕ್ ಮೊಗವೀರ್ ಈ ಚಿತ್ರದ ನಿರ್ಮಾಪಕ ಹಾಗೂ ಈ ಹಿಂದೆ ಸಂಕಲನಕಾರರಾಗಿ ಹಾಗೂ ಖ್ಯಾತ ನಿರ್ದೇಶಕರುಗಳಾದ ಎ. ಪಿ. ಅರ್ಜುನ್ ಮತ್ತು ಪಿ.ಎನ್. ಸತ್ಯರವರ ಜೊತೆಗೆ ಕೆಲಸ ಮಾಡಿರುವ ಅನುಭವವಿರುವ ವೇದ್ ಈ ಚಿತ್ರದ ನಿರ್ದೇಶಕ . ವೇದ್ ಅವರ ಸ್ಕೂಲ್ ರಾಮಾಯಣ ಎನ್ನುವ ಚಿತ್ರ ಕೂಡ ಇನ್ನೇನು ಬಿಡುಗಡೆಯಾಗಬೇಕಿದೆ.
ಪ್ರಬಿಕ್ ಮೊಗವೀರ್ ಅವರ ಹಿಂದಿನ ಚಿತ್ರಗಳಲ್ಲಿ ನಾಗವಲ್ಲಿ , ಗಡಿಯಾರ , ನಾಯಿ , ಅಸುರ ಎನ್ನುವ ಕಥಾವಸ್ತು ಪ್ರಧಾನವಾಗಿತ್ತು ಹಾಗೆ ಈ ಚಿತ್ರದಲ್ಲೂ ವಿಭಿನ್ನ ಪ್ರಯತ್ನ ಮಾಡಲಾಗಿದೆ.ವೇದ್ ಮತ್ತು ಪ್ರಬಿಕ್ ಮೊಗವೀರ್ ಜೊತೆಯಾಗಿ ಚಿತ್ರದ ಪೂರ್ವ ತಯಾರಿ ಕೆಲಸಗಳನ್ನು ಮುಗಿಸಿದ್ದು ಸಧ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ.ಚಿತ್ರದ ತಾರಾಬಳಗದ ಮಾಹಿತಿ ಬಿಟ್ಟುಕೊಡದ ತಂಡ, ಸಾಕಷ್ಟು ಅನುಭವಿ ಕಲಾವಿದರು ನಟಿಸಲಿದ್ದಾರೆ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಕೂಡ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ನೀಡಿದೆ.
Leave a Review