ಬೆಳಗಾವಿ: ಸದನ ಕಲಾಪಕ್ಕೆ ತಡವಾಗಿ ಆಗಮಿಸಿದ ಶಾಸಕರಿಗೆ ತಡವಾಗಿ ಬರಲು ಕಾರಣವೇನು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಫರೀದ್ ಖಾದರ್ ಅವರು ಕಾರಣ ಕೇಳಿದ ಪ್ರಸಂಗ ನಡೆಯಿತು.
ಇಂದು ಬೆಳಗ್ಗೆ 9 ಗಂಟೆಗೆ ಸದನ ಕಲಾಪ ಆರಂಭಗೊಂಡಿತು. ಈ ಸಂದರ್ಭದಲ್ಲಿ ಕೆಲ ಶಾಸಕರು ಸದನ ಕಲಾಪಕ್ಕೆ ತಡವಾಗಿ ಬಂದರು. ಕಲಾಪಕ್ಕೆ ತಡವಾಗಿ ಬಂದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಸಭಾಧ್ಯಕ್ಷ ಖಾದರ್ ಅವರು, ಕಲಾಪಕ್ಕೆ ತಡವಾಗಿ ಬರಲು ಕಾರಣವೇನು ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಸವಕಲ್ಯಾಣದ ಶಾಸಕ ಶರಣು ಸಲಗಾರ್, ಕಾರು ಇರಲಿಲ್ಲ ಸರ್, ಬೇರೆ ಕಾರಿನಲ್ಲಿ ಬರುವುದಕ್ಕೆ ತಡವಾಯಿತು ಎಂದು ಕಾರಣ ನೀಡಿದರು.ಮತ್ತೋರ್ವ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ್, ಇಂಧನ ಸಚಿವರು ಸಭೆ ಕರೆದಿದ್ದರು ಸರ್, ಅದಕ್ಕೆ ಸದನಕ್ಕೆ ಬರುವುದು ತಡವಾಯಿತು ಎಂದು ವಿವರಣೆ ನೀಡಿದರು.
ಬಿಳಿ ಶರ್ಟ್ ಹಾಕಿಕೊಂಡು ಬಂದಿದ್ದೆ ಸರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯವೈಖರಿ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಲು ಕಪ್ಪು ಶರ್ಟ್ ಹಾಕಿಕೊಂಡು ಬರಲು ಹೋಗಿದ್ದೆ ಹಾಗಾಗಿ ತಡವಾಯಿತು ಎಂದ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ವಿವರಣೆ ನೀಡಿದಾಗಸದನಕ್ಕೆ ಕಪ್ಪು ಶರ್ಟ್ ಧರಿಸಬಾರದು, ಆದರೂ ಚೆನ್ನಾಗಿ ಕಾಣಿಸುತ್ತಿದ್ದೀರಿ, ಬೆಳಗ್ಗೆ ಬೇಗ ಎದ್ದು ಸದನಕ್ಕೆ ಬೇಗ ಬನ್ನಿ ಎಂದ ಸ್ಪೀಕರ್ ಸದಸ್ಯರಿಗೆ ಸಲಹೆ ಮಾಡಿದರು.
ಡಾ.ಜಿ.ವೈ. ಪದ್ಮನಾಗರಾಜು