ಕಲಾಸಾಗರ ರಂಗತಂಡದ ಕಲಾವಿದರು ಇತ್ತೀಚಿಗೆ ನಗರದ ಕಲಾಗ್ರಾಮ ರಂಗಮಂದಿರದಲ್ಲಿ ಮೂ .ಚಿ ರಾಮಕೃಷ್ಣ ರಚನೆಯ ಮಹೇಶ್ ಸಾಗರ್ ನಿರ್ದೇಶನದ ಬುನಾದಿ ನಾಟಕದ ರಂಗ ಪ್ರಯೋಗ ಯಶಸ್ವಿಯಾಗಿ ಪ್ರದರ್ಶನವಾಯಿತು. ಮಹಾಭಾರತದ ವಿಶೇಷ ಪಾತ್ರ ಕರ್ಣ ತನ್ನ ಹುಟ್ಟಿನಿಂದಲೇ ಬದುಕನ್ನು ಕಳೆದುಕೊಂಡವನು.
ಅವನ ಸುತ್ತ ಮುತ್ತಲಿನ ಪಾತ್ರಗಳು ಅವನನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರೊ ಅಥವಾ ಪರಿಸ್ಥಿತಿಯ ಕೈಗೊಂಬೆಯಾಗಿ ಏರುವ ಎತ್ತರಕ್ಕೆ ಏರಿ ಕೀರ್ತಿಗಳಿಸದೆ ಅನಾಥನಾದವನು. ಈ ಎಲ್ಲ ಸಂಗತಿಗಳನ್ನು ನಾಟಕ ಪ್ರೇಕ್ಷಕರಿಗೆ ತಿಳಿಸಿಕೊಟ್ಟು ಕರ್ಣನ ಮೇಲೆ ನೋಡುಗರಿಗೆ ಇನ್ನೂ ಹೆಚ್ಚಿನ ಪಾಪಪ್ರಜ್ಞೆ ಹಾಗೂ ಅಭಿಮಾನ ಮೂಡಲು ಕಾರಣವಾಗುತ್ತದೆ.
ಈಗಿನ ಶಿಕ್ಷಣ. ವ್ಯವಸ್ಥೆ. ಜಾತಿಯತೆ. ಭ್ರೂಣ ಹತ್ಯೆ . ದುರಾಡಳಿತ. ಭ್ರಷ್ಟಾಚಾರ. ಅರಾಜಕತೆ. ತೂರಾಡುತ್ತಿರುವ ವ್ಯವಸ್ಥೆ. ಇವೆಲ್ಲ ನಮಗೆ ರಕ್ತಗತವಾಗಿದೆ ಇದೇ ನಮ್ಮ ಸಂಸ್ಕೃತಿ ಎಂಬಂತೆ. ಹೊಂದಿಕೊಂಡು ಬದುಕುತ್ತಿದ್ದೇವೆ. ಈ ರಕ್ತದ ಉಗಮ. ಮೂಲ ಎಲ್ಲಿಯದೆಂದು ಹುಡುಕುವ ಪ್ರಯತ್ನವೇ ಈ ಬುನಾದಿ ನಾಟಕದ ಮೂಲ ಸೆಲೆ.
ಕರ್ಣನ ಪಾತ್ರದಲ್ಲಿ ಮನೋಜ್ ಕುಮಾರ್. ದ್ರೋಣನಾಗಿ ಕಿಶೋರ್ ಕುಮಾರ್. ಪರಶುರಾಮನಾಗಿ ಸುರೇಶ ಅರಕಲಗೋಡು. ದೇವೇಂದ್ರನಾಗಿ ವಿನಾಯಕ. ಸೂರ್ಯದೇವನಾಗಿ ಮಹೇಶ್. ಕುಂತಿಯಾಗಿ ಮಂಗಳ. ದುರ್ಯೋಧನನಾಗಿ ರಂಗನಾಥ್ ಸೊರಬ. ಕೃಷ್ಣನಾಗಿ ಸುಮನ್ ಗೌಡ. ಸೇವಕನಾಗಿ ನವೀನ್ .ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬೆಳಕಿನ ವಿನ್ಯಾಸ ಮೈಕೋ ಶಿವಶಂಕರ್. ವಿನ್ಯಾಸ ಹಾಗೂ ನಿರ್ದೇಶನ ಮಾಡಿದ ಮಹೇಶ್ ಅವರ ಪ್ರಯತ್ನ ಪ್ರಾಮಾಣಿಕವಾಗಿತ್ತು ನಾಟಕದಲ್ಲಿ ಅಭಿನಯಿಸಿದ ಕಲಾವಿದರುಗಳು ಇನ್ನು ಹೆಚ್ಚಿನ ರಂಗ ಪ್ರೀತಿಯನ್ನು ಬೆಳೆಸಿಕೊಂಡಲ್ಲಿ ನಾಟಕ ಇನ್ನೂ ಹೆಚ್ಚು ಆಪ್ತವಾಗುತ್ತದೆ.