ರಿಯಲ್ ಲೈಫ್ ಚಿತ್ರಗಳು ಹೆಚ್ಚು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ `ನೋಡದ ಪುಟಗಳು’ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. `ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲೀಷ್ದಲ್ಲಿ ಅಡಿಬರಹವಿದೆ. ಸುದ್ದಿ ಮಾಡುವ ಸಲುವಾಗಿ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ಬಣಕಾರ್ ಮತ್ತು ಹಿರಿಯ ನಟ ಡಿಂಗ್ರಿನಾಗರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ನವ ಪ್ರತಿಭೆ ಎಸ್.ವಸಂತ್ಕುಮಾರ್ ಸಿನಿಮಾಕ್ಕೆ ರಚನೆ,ನಿರ್ದೇಶನ ಹಾಗೂ ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತ: ಟೆಕ್ಕಿಯಾಗಿರುವ ಇವರು ಬಣ್ಣದ ಲೋಕದ ಆಸೆಯಿಂದ ನಿರ್ದೇಶನದ ಕೋರ್ಸ್ನ್ನು ಕಲಿತುಕೊಂಡು, ಕೂಡ್ಲುರಾಮಕೃಷ್ಣ, ಯೋಗಿ ಅಭಿನಯದ `ಯಕ್ಷ’ ಚಿತ್ರಕ್ಕೆ ಸಹಾಯಕನಾಗಿ ಅನುಭವ ಪಡೆದುಕೊಂಡಿದ್ದಾರೆ. ನಂತರ ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕ ಪ್ರೀತಂಮಕ್ಕಿಹಳ್ಳಿ, ನಾಯಕಿ ಕಾವ್ಯರಮೇಶ್ ಇಬ್ಬರಿಗೂ ಎರಡನೇ ಅವಕಾಶ.
ಉಳಿದಂತೆ ವಾಸು, ವಿಲಾಸ್ಕುಲಕರ್ಣಿ, ಗೌತಂ.ಜಿ, ಅಶೋಕ್ರಾವ್, ಪಿ.ಬಿ.ರಾಜುನಾಯಕ, ಶಾಂತಿ.ಎಸ್.ಗೌಡ, ಮೋಹನ್ಕುಮಾರ್, ರಘುಶ್ರೀವತ್ಸ, ಅಮೃತೇಶ್, ರೇಣುಕಗೌಡ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್ಗೊಣಕಿ-ಸಿ.ರಘುನಾಥ್ ಸಾಹಿತ್ಯದ ಹಾಡುಗಳಿಗೆ ವಿಘ್ನೇಶ್ಮೆನನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕುಮಾರ್.ಎನ್, ಸಂಕಲನ ರಘುನಾಥ್.ಎಂ ಅವರದಾಗಿದೆ. ಹೆಸರಘಟ್ಟ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
Leave a Review