ಹುಬ್ಬಳ್ಳಿ.ಯಾವುದೇ ಸಮೂದಾಯ ಮುಂದೆ ಬರಬೇಕಾದರೆ ಶಿಕ್ಷಣ ಸಂಘಟನೆ ಹೋರಾಟ ಬಹಳ ಮುಖ್ಯ ಎಂದು ಹುಬ್ಬಳ್ಳಿ-ಧಾರವಾಡ ಅವಳಿನಗರದ ಪೂಲಿಸ
ಆಯುಕ್ತ ಎನ್. ಶಶಿಕುಮಾರ ಹೇಳಿ ದರು. ಜಿಲ್ಲಾ ಕಿಳ್ಳೆಕೇತರ, ಶಿಳ್ಳೆಕೇತರ ಅಭಿವೃದ್ಧಿ ಸಂಘದ ಆಶ್ರಯಲ್ಲಿ ಜರುಗಿದ ೨೦೨೫ನೇ ಸಾಲಿನ ಸಾಧಕರು ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದ ಅವರು ಶಿಳ್ಳೆಕೇತರ ಸಮೂದಾಯ ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಹೊಂದಿದ್ದರೂ ಎರಡು ಪದ್ಮಶ್ರೀ ಪ್ರಶಸ್ತಿ ಪಡೆದಿರು ವುದು ತುಂಬಾ ಹೆಮ್ಮೆ ಪಡುವ ವಿಚಾರ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ. ಪಂ. ವೆಂಕಟೇಶ ಕುಮಾರ ಕಿಳ್ಳೆಕೇತರ, ಶಿಳ್ಳೆಕೇತರ ಸಮುದಾಯದ ಜನರು ದೇಶದ ನಾನಾ ಭಾಗಗಳಲ್ಲಿ ವಾಸವಾಗಿದ್ದು ಬೇರೆ ಬೇರೆ ಹೆಸರುಗಳಿಂದ ಗುರು ತಿಸಿಕೊಂಡಿದ್ದಾರೆ ಅವರೆಲ್ಲರನ್ನು ಒಂದೇ ಸಂಘಟನೆಯಲ್ಲಿ ಸೇರಿಸಿ ಸಂಘಟಿತರಾಗುವುದು ಇಂದು ಅಗತ್ಯವಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನರಗುಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಕವಿವಿ ಮಾಜಿ ಸಿಂಡೆಕೇಟ್ ಸದಸ್ಯ ಡಾ. ಮಹಾದೇವ ಬಾಗಡಿ ಮಾತನಾಡಿ ತಾವು ಮಾಡಿದ ಸಾಧನೆಯನ್ನು ಸಮೂದಾಯದವರು ಗುರುತಿಸಿ ಸನ್ಮಾನಿಸಿರುವುದು ತಮ್ಮ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ ಎಂದರು. ಶಿಕ್ಷಕ ಅಶೋಕ ಕಿಳ್ಳಿಕೇತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಸಂಜಯಕುಮಾರ ಮಾಲಗತ್ತಿ ಪದ್ಮಶ್ರೀ ಪುರಸ್ಕöÈತ ಪಂ. ವೆಂಕಟೇಶ ಕುಮಾರ ಅವರ ಜೀವನ ಸಾಧನೆಗಳು ಶಾಲಾ ಮಕ್ಕಳಿಗೆ ಸ್ಪೂರ್ಥಿ ತುಂಬುವ ಪಠ್ಯವಾಗಿ ಪ್ರಕಟಗೊಂಡು ಮುಂದಿನ ಪೀಳಿಗೆಗೆ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಅವರು ಪಟ್ಟ ಪರಿಶ್ರಮ ಪರಿಚಯಿಸುವಂತಾಗಬೇಕು, ಈ ಕುರಿತು ಸಮೂದಾಯದ ಮುಖಂಡರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.
ಸoಘದ ಅಧ್ಯಕ್ಷ ರುದ್ರೇಶ ಬಂಕನೇರ ಅಧ್ಯಕ್ಷತೆ ವಹಿಸಿದ್ದರು, ಭಿಮರಾಯ ಕಿಳ್ಳಿಕೇತರ ನಿರೂಪಿಸಿ ವಂದಿಸಿದರು. ಬಿ.ಎಂ.ಸಾಲಿಮಠ, ಡಾ.ಸಂತೋಷಕುಮಾರ, ಈಶ್ವರ ಕಟ್ಟಿಮನಿ, ಆನಂದ ನಾಗನ್ನವರ, ಸೋಮು ಕಲ್ಲೇದ, ಶಿಗ್ಲಿ, ರಮೇಶ ಕಿಳ್ಳಿಕೇತರ ಸೇರಿದಂತ ಕಿಳ್ಳಿಕೇತರ ಸಮೂದಾಯದ ಮುಖಂಡರು ಉಪಸ್ಥಿತರಿದ್ದರು.