ಬೆಂಗಳೂರು: ೯ನೇ ತರಗತಿಯಲ್ಲಿ ಓದುತ್ತಿದ್ದ ಒರಿಸ್ಸಾ ಮೂಲದ ವಿದ್ಯಾರ್ಥಿನಿ ನಂದಿನಿ ಡಕ್ವ (೧೫) ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಗೊಳ್ಳರಹಟ್ಟಿಯಲ್ಲಿ ವಾಸವಿದ್ದು, ನಂದಿನಿ ಡಕ್ವಾರ್ ಅವರ ತಂದೆ ತಾಯಿ ಕೆಲಸಕ್ಕೆ ಹೋಗಿದ್ದರು.ಮಧ್ಯಾಹ್ನ ಊಟಕ್ಕೆ ಬಂದಾಗ ನಂದಿನಿ ಊಟ ಮಾಡದೆ ಮತ್ತು ಮನೆಯ ಕೆಲಸ ಮಾಡದೆ ಸುಮ್ಮನೆ ಇದ್ದಳು, ಇದನ್ನು ಪ್ರಶ್ನಿಸಿ ಕೆಲಸ ಮಾಡು ಮತ್ತು ಊಟ ಮಾಡು ಎಂದು ಹೇಳಿ ಮತ್ತೆ ಕೆಲಸಕ್ಕೆ ಹೋದರು.ತಂದೆ ತಾಯಿ ಬೈದರು ಎಂದು ನಂದಿನಿ ನೊಂದುಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



