ದೇವನಹಳ್ಳಿ: ಬೆಂಗಳೂರಿನ ವಿವಿಧೆಡೆ ಮಳೆಯ ಆರ್ಭಟ; ರಸ್ತೆಗಳು ಜಲಾವೃತ, ತಗ್ಗು ಪ್ರದೇಶಗಳಲ್ಲಿ ವಾಹನಗಳು ಮುಳುಗಡೆಯಾಗಿದೆ ಎಂದು ರೈತ ಮುಖಂಡ ಬಾಲೆಪುರ ಹರೀಶ್ ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ದೇವನಹಳ್ಳಿ ಪಟ್ಟಣ ವಿವಿಧ ರಸ್ತೆಗಳನ್ನು ಒಳಗೊಂಡಂತೆ ರಾಷ್ಟ್ರೀಯ ಹೆದ್ದಾರಿ ಹಾಜು-ಬಾಜಿನ ಗ್ರಾಮಗಳಾದ ಚನ್ನಹಳ್ಳಿ ಕ್ರಾಸ್, ಬಾಲೆಪುರ ಕ್ರಾಸ್ ವಿಜಯಪುರ ಕ್ರಾಸ್, ದೊಡ್ಡಬಳ್ಳಾ ಪುರ ಕ್ರಾಸ್, ರಾಣಿ ಸರ್ಕಲ್ ಸೇರಿದಂತೆ ಹಲವಾರು ರಸ್ತೆಗಳು ಸುಮಾರು ಮೂರ್ನಾಲ್ಕು ಅಡಿ ಎತ್ತರಕ್ಕೆ ತುಂಬಿಕೊಂಡ ಮಳೆ ನೀರಿನಿಂದ ವಾಹನಗಳು ಸಂಚರಿಸ ಲಾಗದೆ ಸಂಕಷ್ಟ ಎದುರಿಸವಂತಾಗಿದೆ.
ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾ ರಿಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಾಕಷ್ಟು ಬಾರಿ ರಸ್ತೆಯ ಆಜುಬಾಜಿನಲ್ಲಿ ಚರಂಡಿಗ ಳನ್ನು ನಿರ್ಮಿಸುವಂತೆ ಸಾಕಷ್ಟು ಬಾರಿ ಗಮನಕ್ಕೆ ತಂದವರು ಅಧಿಕಾರಿಗಳು ನಿರ್ಲಕ್ಷ ಮನೋಭಾವ ತೋರುತ್ತಿದ್ದಾರೆ. ರಸ್ತೆ ಕಾಮಗಾರಿಯ ಗುತ್ತಿಗೆದಾರರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮಳೆ ನೀರು ನಿಂತುಕೊಂಡ ಸ್ಥಳಗಳಿಗೆ ಭೇಟಿ ನೀಡಿ ಸರಾಗವಾಗಿ ಮಳೆ ನೀರು ಹರಿಯುವ ಮಾರ್ಗಗಳಿಗೆ ತುರ್ತಾಗಿ ಕ್ರಮ ಕೈ ಗೊಳ್ಳ ಬೇಕು. ಇಲ್ಲವಾದಲ್ಲಿ ವಾಹನಗಳು ಸಾಕಷ್ಟು ತೊಡಕುಗಳಿಂದ ಅಡ್ಡಿಯಾಗಲಿದೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಗೊಂಡ ಕೆಎಚ್. ಮುನಿಯಪ್ಪ ಅವರು ಜಿಲ್ಲೆಯ ಉಸ್ತುವಾರಿ ಸಚಿವರು ಆಗಿದ್ದಾರೆ ನಗರದ ಬಹುತೇಕ ರಸ್ತೆಗಳು ಬಾರಿ ಗಾತ್ರದ ಗುಂಡಿಗಳು ಬಿದ್ದಿವೆ. ರಸ್ತೆ ನಿರ್ಮಾಣಕ್ಕಾಗಿ ಬರುವ ಅನುದಾನ ಯಾರ ಜೇಬು ಸೇರುತಿದೆಯೋ ಸಾರ್ವಜನಿಕರಿಗೆ ಅರ್ಥವಾಗುತ್ತಿಲ್ಲ. ರಸ್ತೆ ಅಭಿವೃದ್ಧಿ ಚರಂಡಿಯ ಅಭಿವೃದ್ಧಿ ಬೀದಿ ದೀಪಗಳ ಅಭಿವೃದ್ಧಿ ಗಾಗಿ ಸರ್ಕಾರ ವರ್ಷದಿಂದ ವರ್ಷಕ್ಕೆ ಕೊಟ್ಯಾಂತರ ರೂಪಾಯಿಯನ್ನು ಬಿಡುಗಡೆಗೊಳಿಸುತ್ತಿದೆ.
ಆ ಒಂದು ಅನುದಾನದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಗಳನ್ನು ಒದಗಿಸಿಕೊಡುವ ಜವಾಬ್ದಾರಿ ಸಂಬಂಧ ಪಟ್ಟವರ ಮೇಲಿರುತ್ತದೆ ಎಂದು ಅವರಿಗೆ ಅರ್ಥವಾಗದ ಗಟ್ಟಿ ಚರ್ಮದಂತೆ ವರ್ತಿಸು ತ್ತಿದ್ದಾರೆ.ಅವೈಜ್ಞಾನಿಕ ರಸ್ತೆ ನಿರ್ಮಿಸಲು ಹೊರಟ ಸಂಬಂಧ ಪಟ್ಟವರು ರಾಷ್ಟ್ರೀಯ ಹೆದ್ದಾರಿ ಆಜು- ಬಾಜಿನಲ್ಲಿ ಚರಂಡಿ ಕಾಮಗಾರಿ ಕೈ ಗೊಳ್ಳದಿದ್ದರೆ, ರೈತ ಸಂಘ ಸೇರಿದಂತೆ ಪ್ರಗತಿಪರ ಸಂಘಟ ನೆಗಳು ಬೀದಿಗಿಳಿದು ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.