ಕನಕಪುರ: ಸಾತನೂರು ಹೋಬಳಿ ಹಿಂದಿನಿಂದಲೂ ಜೆಡಿಎಸ್‍ನ ಭದ್ರಕೋಟೆಯಾಗಿದ್ದು, ಪಕ್ಷ ಹಾಗು ಕಾರ್ಯಕರ್ತರಿಗೆ ವರಿಷ್ಠರು ಹೆಚ್ಚು ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಹೋಬಳಿಯ ಯುವಕರು ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗಾರರೊಂದಿಗೆ ದೂಂತೂರು ಸಂತೋಷ್ ಮಾತನಾಡಿ ಸಾತನೂರು ಹೋಬಳಿ ಯಲ್ಲಿ ನಿಷ್ಠಾವಂತ ಜೆಡಿಎಸ್ ಯುವಪಡೆಯೇ ಇದೆ. ಆದರೆ ಪಕ್ಷವನ್ನು ಕಟ್ಟಿಬೆಳೆಸಲು ಪ್ರಭಲ ನಾಯಕತ್ವದ ಕೊರತೆಯಿದೆ. ಕೂಡಲೇ ವರಿಷ್ಠರು ಬೇರುಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದಲ್ಲಿ ಇಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಫಲಿತಾಂಶ ಹೊರಬೀಳಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಹೋಬಳಿಯಲ್ಲಿ ಪಕ್ಷದಲ್ಲಿ ಸಂಚಲನ ಉಂಟು ಮಾಡಬೇಕಾದರೆ ಕೂಡಲೇ ಪಕ್ಷದ ಎಸ್.ಸಿ.ಎಸ್.ಟಿ. ಘಟಕ, ಹಿಂದುಳಿದ ಘಟಕ, ಯುವಘಟಕಗಳು ರಚನೆಯಾಗ ಲೇಬೇಕು. ಹೋಬಳಿ ಮಟ್ಟದ ಬ್ಲಾಕ್ ಅಧ್ಯಕ್ಷರ ನೇಮಕ ಮಾಡಿದಾಗ ಪಕ್ಷಕ್ಕೆ ಆನೆಬಲ ಬರಲಿದೆ.
ಕೂಡಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎ. ಮಂಜು ಇತ್ತ ಗಮನಹರಿಸಿ ಪಕ್ಷ ಸಂಘ
ಟನೆಗೆ ಹುರುಪು ತುಂಬಬೇಕೆಂದು ಒತ್ತಾಯಿಸಿದ್ದಾರೆ. ಮುಖಂಡರುಗಳಾದ ನಿಂಗರಾಜು, ಹೇಮಂತ್, ಅಪ್ಪು, ಮುತ್ತುರಾಜು, ಸಯ್ಯದ್ ಸಮೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a Review