ಕಿರುತರೆ ಹಾಗೂ ಹಿರಿತೆರೆ ಎರಡು ಕಡೆ ತಮ್ಮದೇ ಆದ ಚಾಪು ಮೂಡಿಸಿರುವ ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ, ಗುರುತೇಜ್ ಶೆಟ್ಟಿ ನಿರ್ದೇಶನದ “ಜಾಕಿ-೪೨” ಚಿತ್ರದ ಟೀಸರ್ ಬಿಡುಗಡೆ ಯಾಗಿದೆ. ಭಾರತಿ ಸತ್ಯನಾರಾಯಣ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು, ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ನಡೆಯುವ ಕಥಾಹಂದರವನ್ನು ಹೊಂದಿದೆ. ನೂರಾರು
ಕುದುರೆಗಳು, ಸಾವಿರಾರು ಸಹಕಲಾವಿದರನ್ನೊಳಗೊಂಡ ಸನ್ನಿವೇಶಗಳು ಟೀಸರ್ ನಲ್ಲಿ ಅದ್ದೂರಿಯಾಗಿ ಮೂಡಿಬಂದಿದೆ. ಕಿರಣ್ ರಾಜ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ವಿನೋದ್ ಯಜಮಾನ್ಯ ಸಂಗೀತ ನಿರ್ದೇಶನ, ರಾಘವೇಂದ್ರ
ಬಿ ಕೋಲಾರ ಛಾಯಾಗ್ರಹಣ ಉಮೇಶ್ ಆರ್ ಬಿ ಸಂಕಲನ ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿದೆ.
ನಾಯಕಿಯಾಗಿ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. ದೀಪಕ್ ರೈ ಪಾಣಾಜೆ, ರಾಜೇಂದ್ರ ಕಾರAತ್, ಮಧುಸೂದನ್, ಶಾಂತಲಾ ಕಾಮತ್,ಬಲ ರಾಜ್ವಾಡಿ, ಯಶ್ ಶೆಟ್ಟಿ, ಚೇತನ್ ರೈ ಮಾಣಿ ಮುಂತಾದ ಹೆಸರಾAತ ಕಲಾವಿದರು ತಾರಾಬಳಗದಲ್ಲಿದ್ದಾರೆ. ಹಾರ್ಸ್ ರೇಸ್ ಸುತ್ತ ನಡೆಯುವ ಕಥೆಯಾದರೂ ಫ್ಯಾಮಿಲಿ, ಲವ್, ಆಕ್ಷನ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆಯನ್ನು ಬರೆದಿರುವ ನಿರ್ದೇಶಕ ಗುರುತೇಜ್ ಶೆಟ್ಟಿ.



