ಬೆಂಗಳೂರು: ಮಾಲೀಕ ಮುಂಬಯಿಗೆ ತೆರಳಿದ್ದಾಗ ಸಂಚು ರೂಪಿಸಿ ಜ್ಯುವೆಲರಿ ಶಾಪ್ಗೆ ನುಗ್ಗಿದ ಮನೆ ಕೆಲಸಗಾರ 4 ಕೆಜಿ ಚಿನ್ನ, 34 ಕೆಜಿ ಬೆಳ್ಳಿ, 9 ಲಕ್ಷ ನಗದು ಕಳ್ಳತನ ಮಾಡಿ ಪರಾರಿಯಾದ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಅ.29 ರಂದು ಅರವಿಂದ್ ಕುಮಾರ್ ಥಾಡೆ ಅವರ ಹಲಸೂರು ಗೇಟ್ ಜ್ಯುವೆಲ್ಲರಿ ಶಾಪ್ಗೆ ಸ್ನೇಹಿತ ಜೊತೆಗೆ ಸೇರಿ ನುಗ್ಗಿ ಕಳವು ಮಾಡಿ ಪರಾರಿಯಾಗಿರುವ ರಾಜಸ್ಥಾನ ಮೂಲದ ಕೇತರಾಮ್ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ.
ಮಾಲೀಕ ಅರವಿಂದ್ ಕುಮಾರ್ ಥಾಡೆ ಅವರ ಮನೆ ಕೆಲಸಗಾರನಾಗಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ರಾಜಸ್ಥಾನ ಮೂಲದ ಕೇತರಾಮ್ ಸೇರಿಕೊಂಡಿದ್ದನು. ತನ್ನ ಮಾಲೀಕನೊಂದಿಗೆ ಒಳ್ಳೆಯವನಂತೆ ನಟಿಸುತ್ತಿದ್ದ ಕೇತರಾಮ್, ಆರ್ಥಿಕ ವ್ಯವಹಾರಗಳನ್ನೆಲ್ಲಾ ಅರಿತುಕೊಂಡಿದ್ದ.
ಆದರೆ, ದಸರಾ ಹಬ್ಬ ಹಿನ್ನೆಲೆ ಅರವಿಂದ್ ಕುಮಾರ್ ಅವರು ಮುಂಬಯಿಗೆ ತೆರಳುವ ಸಂದರ್ಭದಲ್ಲಿ ಅವರ ಬ್ಯಾಗ್ನಲ್ಲಿದ್ದ ಬೀಗವನ್ನು ಕೇತರಾಮ್ ಕಳವು ಮಾಡಿದ್ದಾನೆ.ಬಳಿಕ ತನ್ನದೇ ಊರಿನ ರಾಕೇಶ್ ಎಂಬಾತನನ್ನು ಕರೆಸಿಕೊಂಡು ಮಾಲೀಕನ ಜ್ಯುವೆಲ್ಲರಿ ಅಂಗಡಿ ಬೀಗ ತೆರೆದು ಒಳಗೆ ನುಗ್ಗಿದ್ದಾರೆ.
ಬಳಿಕ ಅಂಗಡಿಯಲ್ಲಿದ್ದ 4 ಕೆಜಿ ಚಿನ್ನ, 34 ಕೆಜಿ ಬೆಳ್ಳಿ, 9 ಲಕ್ಷ ನಗದು ಕಳ್ಳತನ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಸ್ಥಳೀಯರು ಅರವಿಂದ್ ಅವರ ಪುತ್ರನಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅರವಿಂದ್ ಪುತ್ರ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.