ಬೆಂಗಳೂರು: ಬಸವೇಶ್ವರನಗರದ ಕಮಲಾನಗರದಲ್ಲಿರುವ ದೇವಾಲಯದಲ್ಲಿ ಮಾರ್ಚ್ ತಿಂಗಳಿನಲ್ಲಿ ದೇವರ ವಿಗ್ರಹದ ಮೇಲಿದ್ದ ಚಿನ್ನದ ಸರ ಕಳವು ಪ್ರಕರಣ ದಾಖಲಾಗಿತ್ತು.ಈ ಪ್ರಕರಣವು ಪತ್ತೆಯಾಗದ ಕಾರಣ ಸಿ ವರದಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಇತ್ತೀಚೆಗೆ ಪೊಲೀಸರು ಠಾಣೆಯ ಶಂಕರ್ ಮಠ ರಸ್ತೆಯ ಸರಹದಿನಲ್ಲಿ ಗಸ್ತಿನಲ್ಲಿ ಇರುವಾಗ ಅನುಮಾನಾಸ್ಪದ ವ್ಯಕ್ತಿಯನ್ನು ಠಾಣೆಗೆ ತಂದು ತೀವ್ರ ವಿಚಾರಣೆ ನಡೆಸಿದಾಗ ತಾನು ಆ ದೇವಾಲಯದ ವಿಗ್ರಹದ ಮೇಲಿದ್ದ 12 ಗ್ರಾಂ ತೂಕದ ಸರ ಕಳವು ಮಾಡುತ್ತಿರುತ್ತೇನೆ ಎಂದು ಒಪ್ಪಿಕೊಂಡಿರುತ್ತಾನೆ.ಆರೋಪಿ ಸೈಯದ್38 ಅಹಮದ್ ನನ್ನು ಬಂಧಿಸಿ ತೀವ್ರ ವಿಚಾರಣೆ ಒಳಪಡಿಸಿದಾಗ ಬಸವೇಶ್ವರನಗರದಲ್ಲಿ ಮತ್ತೊಂದು ಮನೆ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಹಾಗೂ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಂ ಒ ಬಿ ಶೀಟ್ ಅನ್ನು ಸಹ ಈ ಆರೋಪಿಯ ಮೇಲೆ ಓಪನ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿರುತ್ತದೆ.
ಈ ಸಂಬಂಧ ಇನ್ನು ಹೆಚ್ಚು ವಿಚಾರಣೆ ಮಾಡಿದಾಗ ಮೈಸೂರಿನ ವಿವಿಪುರಂಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
ತದನಂತರ ವಿವಿಧ ಪ್ರಕರಣಗಳಲ್ಲಿ ಕಳವು ಮಾಡಿದ ಸುಮಾರು 650 ಗ್ರಾಂ ಚಿನ್ನಾಭರಣ, ವಜ್ರದ ಆಭರಣಗಳು ಮತ್ತು ಒಂದು ಕೆಜಿ ಬೆಳ್ಳಿ ಆಭರಣಗಳನ್ನು ಮಂಡ್ಯದ ಗುತ್ತಲ್ನ ಅವನ ಮನೆಯಲ್ಲಿ ವಶಪಡಿಸಿಕೊಂಡಿರುತ್ತಾರೆ .ಬಸವೇಶ್ವರನಗರ ಪೊಲೀಸರು ಇವುಗಳ ಮೌಲ್ಯ 38 ಲಕ್ಷ ಗಳಾಗಿರುತ್ತದೆ ಎಂದು ತಿಳಿಸಿರುತ್ತಾರೆ.