ದೊಡ್ಡಬಳ್ಳಾಪುರ: ಆಡಳಿತದ ಪ್ರತಿಯೊಂದು ಹಂತದಲ್ಲಿಯೂ ಕನ್ನಡಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕನ್ನಡಭಾಷಾ ವಿಧೇಯಕವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಮೊದಲಾಗಿ ಎಲ್ಲಾ ಕಚೇರಿಗಳಲ್ಲಿಯೂ ಕನ್ನಡ ಭಾಷೆ ಬಳಕೆಯಾಗಬೇಕಿದೆ. ಅಂತೆಯೇ ನಾಮಫಲಕಗಳಲ್ಲಿಯೂ ಕನ್ನಡಕ್ಕೆ ಆದ್ಯತೆ ನೀಡಲೇಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೃಷ್ಣಪ್ಪ ಹೇಳಿದರು.
ನಗರದ ಗಂಗಾಧರಪುರದ ಶ್ರೀ ರಾಜರಾಜೇಶ್ವರಿ ಕನ್ನಡ ಯುವಕ ಸಂಘದ 25 ನೇವಾರ್ಷಿಕೋತ್ಸವ, 68ನೇ ಕನ್ನಡ ರಾಜ್ಯೋತ್ಸವ ಹಾಗೂ ಶ್ರೀ ಮುತ್ಯಾಲಮ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ಕರ್ನಾಟಕದ ಪರಂಪರೆ ಹಾಗೂ ಕನ್ನಡಸಾಹಿತ್ಯ ಶ್ರೀಮಂತವಾಗಿದೆ ಎನ್ನುವುದಕೆ ಕಹಲವಾರು ನಿದರ್ಶನಗಳಿವೆ.
ಕನ್ನಡಭಾಷೆಯ ಬಳಕೆ ಹೆಚ್ಚಾದಷ್ಟು ಭಾಷೆಯ ಅಸ್ತಿತ್ವ ಹೆಚ್ಚಾಗುತ್ತದೆ. ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕಾರ್ಯವಾಗಬೇಕಿದೆ ಎಂದರು.ಶಾಸಕ ಧೀರಜ್ ಮುನಿರಾಜು ಮಾತನಾಡಿ, ಕನ್ನಡ ಇಡೀ ದೇಶದಲ್ಲಿ ಉದ್ಯೋಗ, ವಾಣಿಜ್ಯ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಹೊಂದಿರುವ ರಾಜ್ಯ ಕರ್ನಾಟಕ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳ ಮೂಲಕ ಎಲ್ಲೆಡೆ ಕನ್ನಡದ ವಾತಾವರಣ ನಿರ್ಮಾಣಕ್ಕೆ ಪೂರಕವಾಗಬೇಕು. ಕನ್ನಡನಾಡು ನುಡಿ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕಟಿಬದ್ದರಾಗಬೇಕು ಎಂದರು.
ಸಂಘದ ಅಧ್ಯಕ್ಷ ಆರ್.ಕೆಂಪರಾಜು ಮಾತನಾಡಿ, ಶ್ರೀ ರಾಜರಾಜೇಶ್ವರಿ ಕನ್ನಡಯುವಕ ಸಂಘವು 1998ರಲ್ಲಿ ಸ್ಥಾಪನೆಯಾಗಿ ಪರಭಾಷಿಕರ ಪ್ರಾಬಲ್ಯದ ವಿರುದ್ದ ದನಿ ಎತ್ತುವ ಮೂಲಕ ಸಕ್ರಿಯ ಸಂಘಟನೆಯಾಯಿತು. ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ, ನಗರದ ಸಮಸ್ಯೆಗಳ ವಿರುದ್ದ ಹೋರಾಟ ಸೇರಿದಂತೆ ನಾಡು ನುಡಿಗಾಗಿ ಹಲವಾರು ಹೋರಾಟಗಳನ್ನು ನಡೆಸುವ ಮೂಲಕಸಕ್ರಿಯವಾಗಿದೆ.
ಪ್ರತಿ ವರ್ಷ ಸಂಘದಿಂದ ಆಚರಿಸುವ ಕನ್ನಡ ರಾಜ್ಯೋತ್ಸವದಲ್ಲಿ ಕಲಾವಿದರಿಗೆ ಹಾಗೂ ಸಾಧಕರಿಗೆ ಸನ್ಮಾನ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇದರೊಂದಿಗೆ ನಗರದೇವತೆ ಮುತ್ಯಾಲಮ್ಮ ದೇವಿಯಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ರಾಜ ರಾಜೇಶ್ವರಿ ಕನ್ನಡ ಯುವಕ ಸಂಘದಿಂದ ಹೊರತಂದಿರುವ 2024ನೇ ಇಸವಿಯ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್, ಯೋಗಪಟು ಎನ್.ದರ್ಶಿತ್ ಗೌಡ, ಪೌರ ಕಾರ್ಮಿಕ ಮೇಸ್ತ್ರಿ ಭಗವಂತಪ್ಪ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಜಿ.ಪಂ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ, ನಗರಸಭಾ ಸದಸ್ಯ ವಿ.ಎಸ್.ರವಿಕುಮಾರ್, ವಾಣಿಜ್ಯೋದ್ಯಮಿ ಜೆ.ಸಿ.ನಾಗರಾಜ್, ಕಸಾಪ ತಾಲೂಕು ಖಜಾಂಚಿ ಸಾ.ಲ.ಕಮಲನಾಥ್, ನಗರಸಭಾಸದಸ್ಯರಾದ ಬಂತಿ ವೆಂಕಟೇಶ್, ಪ್ರಭಾನಾಗ
ರಾಜು, ರಾಜ ರಾಜೇಶ್ವರಿ ಕನ್ನಡ ಯುವಕಸಂಘದ ಗೌ.ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಅಧ್ಯಕ್ಷ ಆರ್.ಕೆಂಪರಾಜು, ಕಾರ್ಯದರ್ಶಿ ಕೆ.
ಸತೀಶ್, ಖಜಾಂಚಿ ಆರ್. ಶ್ರೀನಿವಾಸಮೂರ್ತಿ, ಚಂದ್ರು, ರಾಖೇಶ್ ಮೊದಲಾದವರು ಬಾಗವಹಿಸಿದ್ದರು. ಕಡಬಗೆರೆ ಮುನಿರಾಜು ತಂಡದವರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.