ಬೆಂಗಳೂರು: ಲೋಕಸಭಾ ಕ್ಷೇತ್ರದ ಚುನಾವಣೆಯ ಬಳಿಕ ತೆರೆಮರೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಈ ಬಾರಿಯ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಪ್ರಚಾರದ ಗುದ್ದಾಟ ಆರಂಭಿಸಿದ್ದಾರೆ.
ಮಂಡ್ಯ ಕ್ಷೇತ್ರದ ಪ್ರಚಾರಕ್ಕೆ ನನಗೆ ಆಹ್ವಾನವೇ ಬಂದಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ರೆ, ಇತ್ತ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಾಗ ನಾನೇ ಆಹ್ವಾನ ಕೊಟ್ಟಿದ್ದೇನೆ ಎನ್ನುತ್ತಿದ್ದು, ಸದ್ಯ ಇಬ್ಬರ ನಡುವೆ ಪ್ರಚಾರದ ಮುಸುಕಿನ ಗುದ್ದಾಟ ಆರಂಭವಾಗಿದೆ.
14 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಜೆಡಿಎಸ್ನ ಅಭ್ಯರ್ಥಿಗಳು ಕಣದಲ್ಲಿದ್ದರು. ಆ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ನಾಯಕರಿಂದ ಸಮರ್ಪಕವಾದ ಸಹಕಾರ ಸಿಗಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.ಮಾಧ್ಯಮಗಳ ಮುಂದೆ ಬಿಜೆಪಿ ನಾಯಕರ ಅಸಹಕಾರ ಪ್ರಸ್ತಾಪಿಸಿರುವ ಹೆಚ್.ಡಿ.ದೇವೇಗೌಡರು ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ನಮಗೆ ಬಿಜೆಪಿ ಸ್ಥಳೀಯ ನಾಯಕರಿಂದ ಸಹಕಾರ ಸಿಕ್ಕಿಲ್ಲ.
ಇತ್ತ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್, ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಪರ ಕೆಲಸವನ್ನೇ ಮಾಡಿಲ್ಲ. ಪ್ರಚಾರವನ್ನು ಮಾಡಿಲ್ಲ.
ಇತ್ತ ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಕೂಡ ಅಭ್ಯರ್ಥಿ ಪ್ರಜ್ವಲ್ ರೇವಣ್ಣರ ಪರ ಕೆಲಸ ಮಾಡಿಲ್ಲ. ಬೇಕಾಬಿಟ್ಟಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದನ್ನು ಬಿಟ್ರೆ, ಬೇರೆ ಏನನ್ನೂ ಮಾಡಿಲ್ಲ.
ಇದು ಅಸಹಕಾರ ಅಲ್ಲವೇ? ನಾವು ನಮ್ಮ ಪಕ್ಷದ ಕಾರ್ಯಕರ್ತರು ಬಹಳ ನಿಷ್ಠೆಯಿಂದ ಬಿಜೆಪಿಗೆ ಕೆಲಸ ಮಾಡಿದ್ದೇವೆ. ಇಂತಹ ಅಸಹಕಾರ ಮಾಡಿರುವ ನಾಯಕರ ವಿಚಾರವನ್ನು ಹೈಕಮಾಂಡ್ ನಾಯಕರ ಗಮನಕ್ಕೆ ತರಲೇಬೇಕು.ಮುಂದಿನ ದಿನಗಳಲ್ಲಿ ನಾನು ಅದನ್ನು ಮಾಡಿಯೇ ತೀರುತ್ತೇನೆ ಎಂದಿದ್ದಾರೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಪೋಸ್ ಕೊಟ್ಟು, ಸ್ಥಳೀಯ ಮಟ್ಟದಲ್ಲಿ ಅಸಹಕಾರ ಕೊಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ.
ಸಂಸದೆ ಸುಮಲತಾ ಅಂಬರೀಶ್ ಇರಬಹುದು, ಮಾಜಿ ಶಾಸಕ ಪ್ರೀತಂಗೌಡ ಇರಬಹುದು. ಪಕ್ಷದ ಹೈಕಮಾಂಡ್ ನಾಯಕರ ಮಾತಿಗೆ ಬೆಲೆ ಕೊಡಲ್ಲ ಅಂದರೆ ಹೇಗೆ? ಇದನ್ನು ಬಿಜೆಪಿ ಹೈಕಮಾಂಡ್ ನಾಯಕರ ಗಮನಕ್ಕೆ ತರುತ್ತೇನೆ ಎಂದು ಹೆಚ್ಡಿಡಿ ಪಟ್ಟು ಹಿಡಿದಿದ್ದಾರೆ.ಇನ್ನು ಹೆಚ್ಡಿಡಿಗೆ ಅಸಹಕಾರದ ಹಿನ್ನೆಲೆಯಲ್ಲಿ, ಕೆಂಡದಂತಹ ಕೋಪ. ಬಂದಿದೆ. ಸದ್ಯ ಚುನಾವಣಾ ಆಖಾಡದಲ್ಲಿ ಜೆಡಿಎಸ್ನ ಅಭ್ಯರ್ಥಿಗಳಿಗೆ ಅಸಹಕಾರ ತೋರಿದ ಆಧಾರದಲ್ಲಿ ಬಿಜೆಪಿ ನಾಯಕರ ವಿರುದ್ಧ ಆಗುತ್ತಾ ಕ್ರಮ? ಎಂಬ ಡಾಲರ್ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಸಿಗಬೇಕಿದೆ ಉತ್ತರ.