ಕನಕಪುರ: ಶಿವಯೋಗಿ ಸಿದ್ದರಾಮೇಶ್ವರರು ನೂರಾರು ವರ್ಷಗಳ ಹಿಂದೆಯೇ ದೂರ ದೃಷ್ಟಿಯಿಂದ ಕೆರೆಕಟ್ಟೆ ಗಳನ್ನು ನಿರ್ಮಾಣ ಮಾಡಿ ರೈತರಿಗೆ ಅನುಕೂಲ ಮಾಡಿದ್ದ ಮಹಾನ್ ಯೋಗಿ ಎಂದು ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿವಯೋಗಿ ಸಿದ್ದರಾಮೇಶ್ವ ರರು 68,000 ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂಬ ಉಲ್ಲೇಖವಿದೆ ಆದರೆ 1600 ವಚನಗಳು ಮಾತ್ರ ಲಭ್ಯ ವಾಗಿವೆ ಸಿದ್ದರಾಮೇಶ್ವರರ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನ ಆಗಬೇಕು.
800 ವರ್ಷಗಳ ಹಿಂದೆಯೇ ದೂರ ದೃಷ್ಟಿ ಇಟ್ಟುಕೊಂಡು ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ದ್ದರಿಂದ ರೈತರಿಗೆ ಬಹಳಷ್ಟು ಅನುಕೂಲ ಆಗಿದೆ ಯೋಗಿ ಸಿದ್ದರಾಮೇಶ್ವರ ಸಮುದಾಯ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಟ್ಟು ಅವರಿಗೆ ಉತ್ತಮ ಭವಿಷ್ಯ ರೂಪಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದರು.
ಬೋವಿ ಕಮ್ಯುನಿಟಿ ಕೌನ್ಸಿಲ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಕನಕರಾಜ ಮಾತನಾಡಿ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ರೈತರ ಬದುಕನ್ನು ಹಸನು ಮಾಡಿದ ಶಿವಯೋಗಿ ಸಿದ್ದರಾಮೇಶ್ವರರ ಸಮುದಾಯದ ಜನರು ಇಂದಿಗೂ ಸಹ ಕಲ್ಲು ಹೊಡೆಯುವ ಕೆಲಸ ಮಾಡಿ ಕೊಂಡು ಜೀವನ ಮಾಡುತ್ತಿದ್ದಾರೆ ಅಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡ್ತಿದ್ದಾರೆ ಮುಂದಿನ ದಿನಗಳಲ್ಲಿ ಅದು ಆಗಬಾರದು ನಮ್ಮ ಮಕ್ಕಳು ವಿದ್ಯಾ ವಂತರಾಗಬೇಕು ನನ್ನ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಸದೃಢವಾಗಲು ಅಧಿಕಾರಿಗಳು ಸಹಕಾರ ಕೊಡಬೇಕು ಎಂದರು.
ದಮ್ಮ ದೇವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನೀರಾವರಿ ಇಲಾಖೆಯಲ್ಲಿ ನುರಿತ ಅಧಿಕಾರಿಗಳು ಇದ್ದರೂ ಸಹ ವ್ಯರ್ಥವಾಗಿ ಅರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆಗಳನ್ನು ರೂಪಿಸಿಲ್ಲ ಆದರೆ ನೂರಾರು ವರ್ಷಗಳ ಹಿಂದೆ ಶಿವಯೋಗಿ ಸಿದ್ದರಾಮೇಶ್ವರ ಯಾವುದೇ ಅನುಭವ ಇಲ್ಲದೇ ಇದ್ದರೂ ಜಲಕಣ್ಣನ್ನು ಸದ್ಬಳಕೆ ಮಾಡಿಕೊಂಡು ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ರೈತರಿಗೆ ಒಳಿತು ಮಾಡಿದ್ದಾರೆ.
ಸುಮಾರು 800 ವರ್ಷಗಳ ಹಿಂದೆಯೇ ನಾಲ್ಕು ಸಾವಿರಕ್ಕೂ ಹೆಚ್ಚು ಕೆರೆಕಟ್ಟೆಗಳು ಹಾಗೂ ಡ್ಯಾಂ ನಿರ್ಮಾಣ ಮಾಡಿದ್ದು ಭೋವಿ ಸಮಾಜ ಪ್ರಪಂಚದ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಿದೆ ತಾಲೂಕಿನಲ್ಲಿ ಬೇಕಾದಷ್ಟು ಮೈನಿಂಗ್ ಗ್ರಾನೆಟ್ಸ್ ಇದೆ ಆದರೆ ಅದನ್ನು ಈ ಸಮುದಾಯಕ್ಕೆ ಕೊಟ್ಟರೆ ಈ ಸಮುದಾಯ ಆರ್ಥಿಕವಾಗಿ ಮುಂದುವರೆದು ಬಿಡುತ್ತಾರೆ ಎಂಬ ಕಾರಣಕ್ಕೆ ಇವರಿಗೆ ಅವಕಾಶ ಕೊಡುತ್ತಿಲ್ಲ ಭೋವಿ ಸಮುದಾಯ ಆಂತರಿಕ ವಾಗಿ ಕಚ್ಚಾಟಗಳನ್ನು ಬಿಟ್ಟು ಒಗ್ಗಟ್ಟಾಗಿ ಸಮಾಜ ರಾಜಕೀಯ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಸಮರ್ಥವಾದ ನಾಯಕರನ್ನು ಆಯ್ಕೆ ಮಾಡಿಕೊಂಡು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪಶು ಇಲಾಖೆ ಸಹಾಯಕ ನಿರ್ದೇಶಕ ಕುಮಾರ್, ಸಾಹಿತಿ ಕೂಗಿ ಗಿರಿಯಪ್ಪ, ಚಿಕ್ಕ ಕೆಂಪೇಗೌಡ ಬೋವಿ ಕಮ್ಯುನಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಘದ ತಾಲೂಕು ಅಧ್ಯಕ್ಷ ಮಂಜು, ಕಾರ್ಯದರ್ಶಿ ನವೀನ್, ಉಪಾಧ್ಯಕ್ಷ ಕೃಷ್ಣಪ್ಪ, ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಮನಗರ ತಾಲೂಕು ಉಪಾಧ್ಯಕ್ಷ ಅಶೋಕ್, ಕಾರ್ಯಾಧ್ಯಕ್ಷ ರವಿಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಲಕ್ಕಪ್ಪ, ಮುಖಂಡರಾದ ಕೃಷ್ಣ, ಭೋವಿ ದೊಡ್ಡಿ ಚಂದ್ರಪ್ಪ, ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆ ಮುಖಂಡರುಗಳು ಉಪಸ್ಥಿತರಿದ್ದರು.