ಬೇಲೂರು: ನಗರದಲ್ಲಿ ಸಂಭ್ರಮ ಸಡಗರದಿಂದ ವಿಶ್ವವಿಖ್ಯಾತ ಶ್ರೀ ಚನ್ನಕೇಶ್ವರ ಸ್ವಾಮಿ ನಾಡಿನ ಗಳಿಗೆ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.ಸಮಯ ಬೆಳಿಗ್ಗೆ 10.45 ರಿಂದ 11.15 ರ ಮಿಥುನ ಲಗ್ನದ ಗಳಿಗೆಯಲ್ಲಿ ಗೋವಿಂದಾ ಗೋವಿಂದ ಚನ್ನಕೇಶವ ಗೋವಿಂದ ಎನ್ನುವ ಜಯ ಘೋಷದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ನಾಡಿನ ಭಕ್ತ ಸಮೂಹ ವಿಜೃಂಭಣೆಯಿಂದ ರಥ ಹೇಳಿದು ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಅನ್ನಪ್ರಸಾದ ಕುಡಿಯುವ ನೀರು ಮಜ್ಜಿಗೆ ಪಾನಕ ಭಕ್ತಾದಿಗಳಿಗೆ ದೇವಾಲಯ ಆಡಳಿತ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದವು ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಚನ್ನಕೇಶವ ಸ್ವಾಮಿಯ ದರ್ಶನ ಪಡೆದರು.
ರಥೋತ್ಸವದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್. ಹಾಸನ ಜಿಲ್ಲಾಧಿಕಾರಿ ಸತ್ಯಭಾಮ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಚಿತ್ರ.
ಸಂಸದ ಪ್ರಜ್ವಲ್ ರೇವಣ್ಣ. ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ. ತಾಲೂಕು ದಂಡಾಧಿಕಾರಿ ಎಂ ಮಮತಾ. ವೃತ ನಿರೀಕ್ಷಕ ಜಯರಾಮಂ. ಸಿಪಿಐ ಪ್ರವೀಣ್. ಶ್ರೀ ಚನ್ನಕೇಶವ ಸ್ವಾಮಿಯ ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಂಡು.ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಕ್ಕೆ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು .