ದೇವನಹಳ್ಳಿ: ಜಗತ್ತಿನ ಅತಿ ದೊಡ್ಡ ಅಸ್ತ್ರ ಶಿಕ್ಷಣ ಅಂಬೇಡ್ಕರ್ ಪರಪರೆ ಉಳಿಸಲು ವಿದ್ಯಾರ್ಥಿಗಳು ಪರಿಶ್ರಮ ಅತ್ಯವಶ್ಯಕ ಎಂದು ಬೆಂಗಳೂರು ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥ ರಾದ ಪ್ರೊ || ಶಿವಕುಮಾರ್ ಅಭಿಪ್ರಾಯಿಸಿದರು.ದೇವನಹಳ್ಳಿ ಪಟ್ಟಣದ ಕುಂಬೇಶ್ವರ ಪಾರ್ಟಿ ಹಾಲ್ ನಲ್ಲಿ ಪರಮ ಪೂಜ್ಯ ಭೋದಿಸತ್ವ
ಬಾಬಾ ಸಾಹೇಬ್ ಡಾ|| ಬಿಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನೋತ್ಸವ ಅಂಗವಾಗಿ ಭೋಧಿ ಟ್ರೀ ಸಂಯುಕ್ತ ಆಶ್ರಯದಲ್ಲಿ ಅಂಬೇ
ಡ್ಕರ್ ಶಿಕ್ಷಣ ಮತ್ತು ಉದ್ಯೋಗ ಕುರಿತು ವಿಚಾರ ಸಂಕಿರ್ಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬ್ರಿಟಿಷ್ ರನ್ನು ದೇಶದಿಂದ ಬಿಡುಗಡೆ ಮಾಡಲು ಮಹಾತ್ಮ ಗಾಂಧಿ ಹೋರಾಟ ಮಾಡಿದವರಲ್ಲಿ ಶ್ರೀಮಂತ ಕುಟುಂಬದವರೇ ಆಗಿದ್ದರು. ಆಗ ಅಂಬೇಡ್ಕರ್ ಅವರಿಗೆ ಒಂದು ಪ್ರಶ್ನೆ ಎದುರಾಯಿತು ಬ್ರಿಟಿಷ್ ರಿಂದ ಸ್ವತಂತ್ರ ಗೊಂಡರೆ ಭಾರತ ದಲಿತ ಪರಿಸ್ಥಿತಿ ಕಾಡತೊಡಗಿತು. ಮುಂಚೂಣಿ ಹೋರಾಟಗಾರರಿಗೆ ಮಾತ್ರ ಅಧಿಕಾರದಕ್ಕಲು ಸಾಧ್ಯ.
ಹಾಗಿದ್ದ ಮೇಲೆ ದಲಿತರಿಗೆ ವಿದ್ಯೆ, ಉದ್ಯೋಗ, ಭೂಮಿ, ಸಮಾನತೆ ಅಧಿಕಾರ ಅನುಭವಿಸಿದವರಿಂದ ಸಾಧ್ಯವೇ. ಇದನ್ನು ಗಂಭೀರವಾಗಿ ಅರಿತ ಅಂಬೇಡ್ಕರ್ ಅವರು ಸ್ವತಂತ್ರ ಹೋರಾಟಗಾರರಿಗೆ ಜಾತಿ ತಾರತಮ್ಯ, ಶೋಷಣೆ, ಅಸಮಾನತೆ ಬಗ್ಗೆ ಪ್ರಶ್ನಿಸಿದರು. ಸಾವಿರಾರು ವರ್ಷಗಳಿಂದ ದಲಿತರಿಗೆ ನ್ಯಾಯ ದೊರೆಯಲಿಲ್ಲ, ಬ್ರಿಟಿಷ್ ರು ದೇಶ ಬಿಟ್ಟು ಹೊದ ನಂತರ ದಲಿತರನ್ನು ಸಮಾನವಾಗಿ ಕಾಣುವ ನಂಬಿಕೆ ಅಸಾದ್ಯದ ಮಾತು , 1918 ರಿಂದ ದಲಿತರಿಗೆ ಆಗುವ ಅನ್ಯಾಯಗಳ ಬಗ್ಗೆ ಬ್ರಿಟಿಷ್ ರಿಗೆ ನಿರಂತರವಾಗಿ ಮನವಿ ಕೊಡುತ್ತ ಬರುತಿದ್ದರು.
ಅಂಬೇಡ್ಕರ್ ಮೊದಲ ಬೇಡಿಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಪಡೆ ಯಲು 17 ವರ್ಷಗಳ ಅವಿರತ ಪರಿಶ್ರಮಪಟ್ಟರು.ಶಾಸನ ಸಬೆಗಳಿಗೆ ದಲಿತರು ಬರಬೇಕು. ಪ್ರಜಾಪ್ರಭುತ್ವ ಜಾರಿಗೆ ಬರುವಂತೆ ಮಾಡಲು ಬ್ರಿಟಿಷ್ ರಲ್ಲಿ ಮತ್ತೊಂದು ಬೇಡಿಕೆಯನ್ನಿಟ್ಟರು ಅದೇನೆಂದರೆ ಪ್ರತಿಯೊಬ್ಬರಿಗೂ ವಯಸ್ಕ ಮತದಾನ ಹಕ್ಕು ಪಡೆಯುವಲ್ಲಿ ಯಶಸ್ವಿಯಾದರು.
ಸವರ್ಣಿಯರ ವಿರೋದಿಸಿದರು 1935 ರಲ್ಲಿ ಈ ಮಸೂದೆ ಜಾರಿಗೆ ಬರುವಂತಾಯಿತು. ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಮತಧಾನ ಚಲಾಯಿಸುವ ಹಕ್ಕು ಕಲ್ಪಿಸಿದ ಕೀರ್ತಿ ಅಂಬೇಡ್ಕರ್ ಸಲ್ಲತಕ್ಕದು.ಸ್ವತಂತ್ರ ಪೂರ್ವದಲ್ಲಿ ಭಾರತದಲ್ಲಿನ ಶೇ.50 ರಷ್ಟು ಮಹಿಳೆಯರಿದ್ದರು. ಮಹಿಳೆಯರ ಹಕ್ಕುಗಳಿಗಾಗಿ ಹಿಂದೂ ಕೋಡ್ ಪಾರ್ಲಿಮೆಂಟ್ ನಲ್ಲಿ ಮಂಡಿಸಿದರು. ಸವರ್ಣಿಯರಾದ ಅಂದಿನ ಸ್ವತಂತ್ರ ಹೋರಾಟಗಾರರು ವಿರೋಧಿಸಿದರು. ಈ ಬಿಲ್ ಯಾರೇಲ್ಲಾ ವಿರೋದಿಸು ತ್ತಾರೊ..ಅವರೆಲ್ಲಾ..ಇಂದಲ್ಲ ನಾಳೆ ಈ ಮಸೂದೆ ಪಾಸ್ ಆಗೆ ತೀರುತ್ತಾರೆ ಎಂದು ಶಪತ ಮಾಡಿ ಪಾರ್ಲಿಮೆಂಟ್ ನಿಂದ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರ. ಬರುತ್ತಾರೆ.
ಅಸಂಘಟಿತ ಕಾರ್ಮಿಕರನ್ನು 12 ರಿಂದ 15 ಗಂಟೆಗಳ ಕಾಲ ದುಡಿಸಿಕೊಳ್ಳುತಿದ್ದರು. 1942 ರಲ್ಲಿ 8 ಗಂಟೆ ಕಾಲ ಮಾತ್ರ ಕೆಲಸ, ವಿಮಾ, ಸೌಲಭ್ಯ, ಮಹಿಳೆಯರು ಹೆರಿಗೆಗೆ ಹೋದರೆ ಭತ್ಯೆ ನೀಡಬೇಕು. ಲಿಂಗ, ವರ್ಗ, ಜಾತಿ ಕಾನೂನಿನ ಮುಂದೆ ಯಾರು ದೊಡ್ಡವರಲ್ಲ, ಅಸ್ಪೃಶ್ಯತೆ ಆಚರಣೆ ಮಾಡುವುದು ಕೂಡ ಅಪರಾಧವೆಂದು ಕಾನೂನಿನಲ್ಲಿ ಅಳವಡಿಸಿದ್ದಾರೆ.
ಅಂಬೇಡ್ಕರ್ ಅವರ ಕೊನೆ ಭಾಷಣದಲ್ಲಿ ಮಾತನಾಡಿ, ದಲಿತರೆಲ್ಲ ಆರ್ಥಿಕವಾಗಿ, ರಾಜಕೀಯವಾಗಿ ಸಮಾನರಾಗ ಬೇಕು. ಸಾಮಾಜಿಕ ನ್ಯಾಯ ಜನತೆಗೆ ಕಲ್ಪಿಸಲು ಕೇವಲ ನಾಲ್ಕು ಸರ್ಕಾರಗಳಿಂದ ಸಾಕು ಎಂದು ಅಂದೇ ಪಾರ್ಲಿಮೆಂಟ್ ನಲ್ಲಿ ಹೇಳಿದರು. ಏಕಾಂಗಿ ಹೋರಾಟದ ಪರಿಣಾಮ ಅನುಷ್ಠಾನಕ್ಕೆ ಬರಲಿಲ್ಲ, ಬುದ್ದಿವಂತರಾದರೆ ಯಾವುದೇ ಸವಾಲು ಆದರು ಗೆದ್ದು ಬರಬಹುದು. ಪ್ರಸ್ತುತ ದೇಶದ ಶೇ.10 ಜನರಲ್ಲಿ ಆಸ್ತಿ ಹಕ್ಕು ಹೆಚ್ಚಾಗಿತ್ತು ದಲಿತರು ಒಂದು ಹೊತ್ತಿನ ಹಸಿವು ನೀಗಿಸಿಕೊಳ್ಳಲಾಗದ ಕಿತ್ತು ತಿನ್ನುವ ಬಡತನ ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳ ಬೇಕು.ಅಂಬೇಡ್ಕರ್ ಅವರು ರಾಜಕೀಯ, ಆರ್ಥಿಕ, ಶಿಕ್ಷಣದಲ್ಲಿ ಹೆಚ್ಚಿನ ಪಾಂಡಿತ್ಯ ಉಳ್ಳವರು ಆಗಿದ್ದ ಪ್ರಮುಖ ಕಾರಣದಿಂದ ದಲಿತರು ಇಂದು ಬದುಕುವ ಕಲ್ಪಿಸಿದ್ದಾರೆ.
ಅಂಬೇಡ್ಕರ್ ಅವರು ಸಂತಕಬೀರ್ ದಾಸ್, ಜ್ಯೋತಿ ಬಾ ಪುಲೆ, ಮುಂತಾದ ಸಮಾಜ ಸುಧಾರಕರ ಅನುಯಾಯಿ ಗಳು ಅಗಿದ್ದರು. ಕೋಪ ತಾಪ ಕಡಿಮೆ ಮಾಡಿಕೊಳ್ಳ ಲಾಗದೆ ದಲಿತರು ಕಾನೂನು ಬಂದಿಗಳಾಗಿದ್ದಾರೆ. ಸವರ್ಣಿಯರು ದೇಶ ಲೂಟಿ ಮಾಡಿತ್ತಾರೆ ಅವರನ್ನು ಕಾನೂನು ಬಂಧನದಲ್ಲಿ ಸಿಲುಕಿಕೊಳ್ಳಲಾರರು. ನಮ್ಮವರು ಸಣ್ಣಪುಟ್ಟ ವ್ಯಾಜ್ಯಗಳಲ್ಲಿ ಕಾನೂನು ಆರೋಪಿಗಳು ಅಗುತಿದ್ದಾರೆ. ಪ್ರತಿ ದಿನ ಹೆಚ್ಚು ಓದಿನಲ್ಲಿ ತೊಡಗಬೇಕು. ಸಂವಿಧಾನದಲ್ಲಿ ಉಚಿತ ಶಿಕ್ಷಣ, ಉದ್ಯೋಗ ಕೊಡುವ ಕೆಲಸ ಸರ್ಕಾರದ್ದು, ಅನುಷ್ಠಾನ ದಲ್ಲಿ ಖಾಸಗಿ ಕರಣ ಮಾಡಲು ಹೊರಟಿದ್ದಾರೆ. ಶಾಲಾ ಕಾಲೇಜು ಗಳಿಗೆ ತೆರಳು ವುದು ಉದ್ಯೋಗಕ್ಕಾಗಿ ಇವತ್ತು ಎಷ್ಟೇ ಲ್ಲಾ ಪ್ರತಿಭಾ ವಂತರಿಗೆ ಉದ್ಯೋಗ ದೊರೆಯುತ್ತಿದೆ.
ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಕಾಳಜಿ ವಹಿಸಿ ಅಂಬೇಡ್ಕರ್ ಪರಂಪರೆಯನ್ನು ಉಳಿಸಿ ಬೆಳೆಸುವ ಮುಖ್ಯ ಉದ್ದೇಶದಿಂದ ಈ ಒಂದು ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ ಪ್ರತಿಯೊಬ್ಬರೂ ಸದೃಪಯೋಗಪಡಿಸಿ ಕೊಂಡು ತಳ ಸಮುದಾಯಗಳು ಸಮ ಸಮಾಜದ ಏಳಿಗೆ ಗಾಗಿ ಸೇವೆ ಸಲ್ಲಿಸುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಈ ವೇಳೆ ಕಾರ್ಯಕ್ರಮದ ಆಯೋಜಕ ರಾದ ಖ್ಯಾತ ಯವ ವಕೀಲರಾದ ಮಹೇಶ್ ದಾಸ್, ಕಾರಹಳ್ಳಿ ಕೇಶವ, ಅಂಬರೀಶ್ ಸೇರಿದಂತೆ ವಿದ್ಯಾರ್ಥಿ/ವಿದ್ಯಾರ್ಥಿ ನಿಯರು, ಪಾಲಕರು, ಪ್ರಗತಿ ಪರ ಸಂಘಟನೆಯ ಮುಖಂಡರು ಹಾಜರಿದ್ದರು.