ಬೆಂಗಳೂರು: ಉಡುಗೊರೆ ರೂಪದಲ್ಲಿ ಬಂದಿದ್ದ ಬೈಕ್ಗೆ ನಡುರಸ್ತೆಯಲ್ಲೇ ಬೆಂಕಿಯಿಟ್ಟು ಸುಟ್ಟುಹಾಕಿದ ಯುವಕನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರನಗರದ ಹಾವನೂರು ಸರ್ಕಲ್ ಬಳಿ ನಿನ್ನೆ ರಾತ್ರಿ ಪಲ್ಸರ್ ಬೈಕ್ಗೆ ಬೆಂಕಿಯಿಟ್ಟು ಸುಟ್ಟುಹಾಕಿದ್ದ ಯಶವಂತ್ ಬಂಧಿತ ಆರೋಪಿಯಾಗಿದ್ದಾನೆ.
ಬೆಂಕಿ ಬಿದ್ದಿರುವ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಪರಾರಿಯಾಗಿದ್ದ ಯುವಕನನ್ನು ಹುಡುಕಾಟ ನಡೆಸಿ ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಕೆಎ ೦೨ ಎಲ್ ಡಿ ೩೨೬೯ ಎಂಬ ತನ್ನ ಬೈಕ್ಗೆ ನಡುರಸ್ತೆಯಲ್ಲೇ ಬೆಂಕಿಯಿಟ್ಟ ಯುವಕ ತಂದೆ-ತಾಯಿಗೆ ಹುಷಾರಿಲ್ಲದೇ ಹಣಕ್ಕಾಗಿ ಪರದಾಡಿ ಬೈಕ್ ಅಡ ಇಟ್ಟು ಸಾಲ ಮಾಡಲು ಮುಂದಾಗಿದ್ದನು, ಆದರೆ ಬೈಕ್ ಯುವಕನ ಹೆಸರಲ್ಲಿ ಇರಲಿಲ್ಲ. ಉಡುಗೊರೆ ಕೊಟ್ಟವರ ಹೆಸರಲ್ಲಿ ಬೈಕ್ ಇದ್ದರಿಂದ ಅಡವಿಟ್ಟು ಹಣ ಪಡೆಯಲಾಗದೇ ಬೆಂಕಿ ಇಡಲು ನಿರ್ಧರಿಸಿದ್ದ ಎಂದು ತಿಳಿದುಬಂದಿದೆ.



