ಕನಕಪುರ: ಇಂದಿನ ಯುವ ಪೀಳಿಗೆಗೆ ನಮ್ಮ ನೆಲ ಜಲ ಭಾಷೆ,ಸಂಸ್ಕೃತಿಯ ಬಗ್ಗೆ ಪ್ರೀತಿ ಅಭಿಮಾನವನ್ನು ಬೆಳಸಿ ಕೊಳ್ಳಬೇಕಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಯ ಮಾಜಿ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
ನಗರದ ರಂಗನಾಥ ಬಡಾವಣೆಯಲ್ಲಿರುವ ಹೊಂಗಿರಣ ಸಭಾಂಗಣದಲ್ಲಿ ಸ್ವತಂತ್ರ ಕರ್ನಾಟಕ ಜಿಲ್ಲಾ ಲೇಖಕರ ವೇದಿಕೆ ಮತ್ತು ಮಾತೃಶ್ರೀ ನಮನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕವಿ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಯುವಕರಲ್ಲಿ ನಮ್ಮ ನೆಲ ಜಲ ಭಾಷೆ ಸಂಸ್ಕೃತಿಯ ಬಗ್ಗೆ ಪ್ರೀತಿ ಅಭಿಮಾನವಿಲ್ಲ ಅವರಿಗೆ ಕವಿತೆ ಸಾಹಿತ್ಯದ ಬಗ್ಗೆ ಅರಿವಿಲ್ಲದಂತಾಗಿ ಆಧುನಿಕ ಪಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.
ಇಂತವರಿಗೆ ಕರ್ನಾಟಕದ ಕವಿಗಳಾದ ಕುವೆಂಪುಬೇಂದ್ರೆ ನಿಸಾರ್ ಅಹಮದ್ ಅವರಂತಹ ಕವಿಗಳಬಗ್ಗೆ ಅವರ ರಚಿಸಿರುವ ಕಾವ್ಯಗಳ ಬಗ್ಗೆ ತಿಳಿಸಿಕೊಡುವಂತಹ ಇಂತಹ ತಾಲೂಕು ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಷಯ, ಇವಾಗಲಾದರೂ ಎಚ್ಚೆತ್ತುಕೊಂಡು ಯುವಕರು ನೆಲ ಜಲ ಭಾಷೆ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಮದ ಚಂದ್ರು ಮಾತನಾಡಿ ಕನ್ನಡ ನೆಲ,ಜಲ,ಭಾಷೆ ಸಂಸ್ಕೃತಿಗಳ ಸಂವರ್ಧನೆಗೆ ಹಾಗೂ ಅದರ ಉಳಿವಿಗಾಗಿ ಸರ್ಕಾರ ಹೆಚ್ಚಿನ ಆರ್ಥಿಕ ಸಹಕಾರ ನೀಡುವ ಮೂಲಕ ನಾಡಿನ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚನ್ನಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮತ್ತಿಕೆರೆ ಚೆಲುವರಾಜ್ ಮಾತನಾಡಿ ಇಂದಿನ ಕವಿಗಳು ರಾಷ್ಟ್ರಕವಿ ಕುವೆಂಪು, ಪಾಟೀಲ್ ಪುಟ್ಟಪ್ಪ ಅವರಂತಹ ಮಹಾಕವಿ ಗಳ ಆದರ್ಶವನ್ನು ಅಳವಡಿಸಿಕೊಂಡು ಅವರು ನಾಡಿಗೆ ನೀಡಿದಂತಹ ಜನರಲ್ಲಿ ಅರಿವು ಮೂಡಿಸುವಂತಹ ಕಾವ್ಯಗಳನ್ನು ರಚಿಸುವಂತೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಚೆಲೂರು ಮುನಿರಾಜು, ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್, ಕಾರ್ಮಿಕ ಘಟಕ ಅಧ್ಯಕ್ಷ ಸರ್ದಾರ್ ಖಾನ್ ಸೇರಿದಂತೆ ಹಲವರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ತಾಲೂಕು ಮಟ್ಟದ ಕವಿ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲೇ ಬಹುಮಾನವನ್ನು ಗಟ್ಟಿಗುಂದ ಮಹಾದೇವ ಎರಡನೇ ಬಹುಮಾನವನ್ನು ಮೇದರ ದೊಡ್ಡಿಯ ಹನುಮಂತು,ಮೂರನೇ ಬಹುಮಾನವನ್ನು ಹುಣಸನ ಹಳ್ಳಿ ನಾಗೇಂದ್ರ ರವರು ಪಡೆದುಕೊಂಡರು.