ಕನಕಪುರ: ಇಂದಿನ ದಿನಗಳಲ್ಲಿ ಕೃಷಿಯಲ್ಲಿ ಯುವ ರೈತರು ಬೆರಳೆಣಿಕೆ ಮಂದಿ ಮಾತ್ರ ತೊಡಗಿಸಿಕೊಳ್ಳುತ್ತಿದ್ದು ಇದಕ್ಕೆ ಮುಖ್ಯಕಾರಣ ಕೃಷಿ ಚಟುವಟಿಕೆಗಳಲ್ಲಿ ಆದಾಯ ಕಡಿಮೆ ಇರುವುದು,ಯುವ ಜನತೆ ವ್ಯವಸಾಯದ ಜೊತೆ ಜೊತೆಗೆ ಇನ್ನಿತರ ಉಪಕಸುಬುಗಳನ್ನು ಮಾಡುವುದರಿಂದ ತಮ್ಮ ಆದಾಯದ ಮಟ್ಟ ಹೆಚ್ಚಾಗಲಿದೆ ಎಂದು ರಾಮನಗರ ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪರ ಪ್ರಶಾಂತ್ ಪ್ರಭು ತಿಳಿಸಿದರು.
ಕೆನರಾ ಬ್ಯಾಂಕ್ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹಾರೋಹಳ್ಳಿ ಹಾಗೂ ಕುರಿ ಅಭಿವೃದ್ದಿ ಮಂಡಳಿ ರಾಮನಗರ ಇವರ ಸಂಯುಕ್ತಾಶ್ರಯದಲ್ಲಿ 10 ದಿನಗಳ ಕಾಲ ನಡೆದಂತಹ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕುರಿ ಸಾಕಾಣಿಕೆ ಮಾಡುವುದು ಉತ್ತಮ ಆದಾಯ ಗಳಿಕೆಯ ಚಟುವಟಿಕೆಯಾಗಿದ್ದು ಕುರಿಸಾಕಾಣಿಕೆಯನ್ನು ವೈಜ್ಞಾನಿಕ ವಿಧಾನದಲ್ಲಿ ಮಾಡು ವುದರಿಂದ ಯಾವುದೇ ನಷ್ಟವಾಗುವುದಿಲ್ಲ,
ಉತ್ತಮ ತಳಿಗಳನ್ನು ತಂದು ಪೌಷ್ಟಿಕಾಂಶಭರಿತ ಆಹಾರವನ್ನು ನೀಡಿ ಕುರಿಗಳನ್ನು ಸಾಕುವುದರಿಂದ ಆರ್ಥಿಕವಾಗಿ ಅನುಕೂಲ
ವಾಗಲಿದೆ ಯಾವುದೇ ವೃತ್ತಿಯಲ್ಲಿಯೂ ಸೃಜನಶೀಲತೆ ಮುಖ್ಯರಚ ನಾತ್ಮಕತೆಯಿಂದಾಗಿ ವ್ಯಕ್ತಿಯ ವ್ಯಕ್ತಿತ್ವದ ವಿಕಸನವಾ
ಗುತ್ತದೆಂದು ತಿಳಿಸಿದರು.
ಈ ರೀತಿಯ ಚಟುವಟಿಕೆಗಳಿಗೆ ಬ್ಯಾಂಕಿನಲ್ಲಿಯೂ ಸಹ ಸಾಲ ಸೌಲಭ್ಯಗಳಿದ್ದು ಅವುಗಳನ್ನು ಸರಿಯಾದ ರೀತಿ ಯಲ್ಲಿ ಬಳಸಿಕೊಂಡು ಉದ್ಯಮದಲ್ಲಿ ತೊಡಗುವಂತೆ ಸಲಹೆ ನೀಡಿದರು.ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ|| ಪ್ರದೀಪ್ ರವರು ಕುರಿ ಅಭಿವೃದ್ದಿ ಮಂಡಳಿಯ ಮೂಲಕ ಕುರಿಯ ವಿವಿಧ ತಳಿಗಳನ್ನು ಸಾಕಲು ಸಹಕಾರಿ ಸಂಘ ಗಳ ಮುಖೇನ ವಿವಿಧ ರೀತಿಯ ಸಾಲಸೌಲಭ್ಯಗಳನ್ನು ನೀಡಲಾಗುವುದು,ಈ 10 ದಿನಗಳ ತರಬೇತಿಯಲ್ಲಿ ತಾವುಗಳು ಕಲಿತಂತಹ ವಿಷಯಗಳನ್ನು ನಿಮ್ಮ ಉದ್ಯಮ ದಲ್ಲಿ ಅಳವಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗ ಬಹುದಾಗಿದೆ ಎಂದರು.
ಸಂಸ್ಥೆಯ ನಿರ್ದೇಶಕ ಚಂದ್ರ ಚರಣ್ ಮಾತನಾಡಿ ವಿವಿಧ ಯೋಜನೆಗಳ ಮೂಲಕ ಇರುವಂತಹ ಸೌಲಭ್ಯಗಳನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗ ಬಹು ದಾಗಿದ್ದುತರಬೇತಿಯಿಂದ ಕಲಿತಂತಹ ವಿಷಯಗಳನ್ನು ಸಂಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕಿದೆ.
ಬ್ಯಾಂಕಿನ ವಿಚಾರವಾಗಿ ಪೂರ್ವಗ್ರಹಪೀಡಿತರಾಗದೆ ಕಲ್ಪನೆಗಿಂತ ವಾಸ್ತವದ ಅನುಭವವಾಗಬೇಕು ಎಂಬುದಾಗಿ ತಿಳಿಸುತ್ತಾ ತಮ್ಮೆಲ್ಲರಿಗೂ ಸಂಸ್ಥೆಯ ಸಹಕಾರ ಯಾವಾಗಲೂ ಇರುತ್ತದೆ ಎಂಬುದಾಗಿ ತಿಳಿಸಿದರು.ರಾಮನಗರ ಕುರಿ ಅಭಿವೃದ್ದಿ ಮಂಡಳಿಯ ಡಾ.ಪ್ರದೀಪ್, ಶಿವರಾಮಯ್ಯ, ಚಂದ್ರಪ್ಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು, ಸಂಸ್ಥೆಯ ಉಪನ್ಯಾಸಕ ದೇವೀಂದ್ರಪ್ಪ, ನೇತ್ರಾವತಿಸೇರಿದಂತೆ ತರಬೇತಿ ಶಿಕ್ಷಕರು, ಶಿಬಿರಾರ್ಥಿಗಳು ಈ ವೇ?ಳೆ ಉಪಸ್ಥಿತರಿದ್ದರು.