ಬೆಂಗಳೂರು : ಬನ್ನೇರುಘಟ್ಟ ಪೊಲೀಸ್ ಠಾಣ ವ್ಯಾಪ್ತಿಯ ವಡ್ಡರಹಳ್ಳಿ ಗ್ರಾಮದ ಅಪಾರ್ಟ್ಮೆಂಟ್ನಲ್ಲಿ ಬಾಬು ಎಂಬವರು ವಾಸವಿದ್ದು ರಜೆಯ ಕಾರಣ ಎರಡು ದಿನ ಟ್ರಿಪ್ ಹೋಗಿದ್ದರು.
ಅಪರಿಚಿತ ವ್ಯಕ್ತಿಗಳು ಮನೆ ಬೀಗ ಮುರಿದು ೫೦,೦೦೦ ನಗದು ಸೇರಿದಂತೆ ೨೪ ಲಕ್ಷ ರೂಪಾಯಿ ಬೆಲೆ ಬಾಳುವ ೧೪೦ ಗ್ರಾಂ ಚಿನ್ನಾಭರಣ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಬನ್ನೇರುಘಟ್ಟ ಪೊಲೀಸರು ಕಳ್ಳತನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.



