ಬೆಂಗಳೂರು: ರಾಜ್ಯದಲ್ಲಿ ಸುಮಾರು ಏಳು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಕರ್ನಾಟಕ ರಾಜ್ಯದಲ್ಲಿ 45000 ರೌಡಿಶೀಟರ್ಗಳ ಪಟ್ಟಿ ಇದೆ ಎಂದು ಪೊಲೀಸ್ ಇಲಾಖೆಯ ಮಾಹಿತಿಯಲ್ಲಿ ದೊರೆತಿದೆ.2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಎಲ್ಲಾ ರೌಡಿಶೀಟರ್ಗಳನ್ನು ಆಯಾ ಪೊಲೀಸ್ ಠಾಣಾ ಮಟ್ಟದಲ್ಲಿ ಠಾಣೆಗೆ ಕರೆಸಿ ಯಾವುದೇ ಸಮಾಜಘಾತಕ ಘಟನೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಮತ್ತು ಮುಚ್ಚಳಿಕೆ ಬರೆಸಿ ಕೊಂಡು ಕಳಿಸಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಅಲೋಕ್ ಮೋಹನ್ ರವರು ಆದೇಶ ನೀಡುತ್ತಾರೆ.
ಈ 45000 ರೌಡಿಶೀಟರ್ ಪಟ್ಟಿಯಲ್ಲಿ ಮಹಿಳೆಯರು ಸಹ ಸೇರಿರುತ್ತಾರೆ. 21 ವಯಸ್ಸು ಮೇಲ್ಪಟ್ಟ ಎಲ್ಲಾ ವರ್ಗದ ಜನರಿರುತ್ತಾರೆ. ರೌಡಿ ಶೀಟ್ ತೆರೆಯಲು ಪೊಲೀಸ್ ಇಲಾಖೆಯ ಮಾನದಂಡ ಪ್ರಕಾರ ಎರಡು ಕೇಸ್ಗಳಲ್ಲಿ ಅಂದರೆ ಸಾಮಾನ್ಯ ಅಪರಾಧ ಅಥವಾ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವುದು ಹಾಗೂ ಇನ್ನೂ ಅಧಿಕ.ಎ.ಬಿ. ಸಿ ಎಂದು ಮೂರು ವರ್ಗದಲ್ಲಿ ರೌಡಿ ಶೀಟರ್ ಪಟ್ಟಿಯನ್ನು ಪ್ರತಿ ಪೊಲೀಸ್ ಠಾಣೆಯಲು ತೆರೆಯಲಾಗುತ್ತದೆ.
ಜಿಲ್ಲಾ ಮಟ್ಟದಲ್ಲಿ ಡಿ.ವೈ.ಎಸ್ಪಿ ಮತ್ತು ಆಯುಕ್ತರ ಕಚೇರಿ ಮಟ್ಟದಲ್ಲಿ ಎ.ಸಿ.ಪಿ ರವರಿಗೆ ಆ ರೌಡಿ ಪಟ್ಟಿಗೆ ಅರ್ಹನಾಗಿರುವ ಸದರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವರು ಆಸಾಮಿಯ ಎಲ್ಲಾ ಮಾಹಿತಿ ನೀಡಿ ಆದೇಶ ಪಡೆದು ಸದರಿ ಪೊಲೀಸ್ ಠಾಣೆಗಳಲ್ಲಿ ರೌಡಿ ಪಟ್ಟಿಯನ್ನು ತೆರೆಯಲಾಗುತ್ತದೆ.ರಾಜ್ಯದಲ್ಲಿ 30 ಜಿಲ್ಲೆ ಸೇರಿದಂತೆ ಆರು ಪೊಲೀಸ್ ಆಯುಕ್ತರ ಕಚೇರಿಗಳಿದ್ದು ಅಂದರೆ (ಬೆಂಗಳೂರು ನಗರ, ಹುಬ್ಬಳ್ಳಿ ಮತ್ತು ಧಾರವಾಡ, ಮಂಗಳೂರು, ಬೆಳಗಾಂ, ಗುಲ್ಬರ್ಗ ಮತ್ತು ಮೈಸೂರು ) ಒಂದು ಸಾವಿರದ ನೂರು (1100) ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಿರುತವೆ.
ಉದಾಹರಣೆಗೆ ಮಹಿಳೆಯನ್ನು ಚುಡಾಯಿಸುವುದು, ಜನರಿಗೆ ಭಯ ಬೀಳಿಸುವುದು, ಗೂಂಡಾಗಿರಿ ಮಾಡುವುದು, ಹಫ್ತ ವಸೂಲಿ ಮಾಡುವುದು, ದರೋಡೆ, ಕೊಲೆ, ಕೊಲೆ ಯತ್ನ ಹಾಗೂ ಇತರೆ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗಿರುವುದು ಸೇರಿದಂತೆ ಇನ್ನೂ ಹಲವು ಪ್ರಕರಣಗಳಲ್ಲಿ ಇರುವುದು. ಗಾಂಜಾ ಮಾರಾಟ ಮಾಡುವುದು, ಡ್ರಗ್ಸ್ ಮಾರಾಟ ಮಾಡುವುದು ಸೇರಿದಂತೆ ಇನ್ನೂ ಇತರೆ ಸಮಾಜಘಾತುಕ ಘಟನೆಗಳಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ಭಯ ಬೀಳಿಸುವುದು.
ರೌಡಿ ಪಟ್ಟಿಯಲ್ಲಿರುವ ಆಸಾಮಿಯು ಆಗಿಂದಾಗೆ ಹೀನ ಕೃತ್ಯಗಳಲ್ಲಿ ಭಾಗಿಯಾಗುತಿದ್ದರೆ ನ್ಯಾಯಾಧೀಶರ ಅಪ್ಪಣೆ ಪಡೆದು ಗಡಿಪಾರನ್ನು ಸಹ ಮಾಡಬಹುದು.