ಪೀಣ್ಯ ದಾಸರಹಳ್ಳಿ: ಕನ್ನಡದ ಮೇಲೆ ಆಂಗ್ಲ ಭಾಷೆ ಸವಾರಿ ಮಾಡುತ್ತಿರುವುದು ಹೊರಜಿಲ್ಲೆಗಿಂತ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು , ಕನ್ನಡಿಗರಿಗೆ ಪರಭಾಷೆಯ ವ್ಯಾಮೋಹ ಹೆಚ್ಚುತ್ತಿದ್ದು ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರೇಮಕವಿ ಕವಿ ಬಿ.ಆರ್. ಲಕ್ಷ್ಮಣರಾವ್ ವಿಷಾದಿಸಿದರು.
ಪೀಣ್ಯ ಕೈಗಾರಿಕಾ ಸಂಘದಿಂದ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಸಾವಿಲ್ಲ. ಉದ್ಯೋಗಕ್ಕೆ ಆಂಗ್ಲ ಭಾಷೆ ಬೇಕು, ಹಾಗಂತ ಕನ್ನಡವನ್ನು ಮರೆಯಬಾರದು. ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸಂಘದ ಅಧ್ಯಕ್ಷ ಹೆಚ್ ಎಂ ಆರೀಪ್ ಮಾತಾನಡಿ ಕನ್ನಡ ರಾಜ್ಯೋತ್ಸವ ಬರೀ ಕನ್ನಡಿಗರಿಗೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ವಾಸಿಸುತ್ತಿರುವರೆಲ್ಲರ ರಾಜ್ಯೋತ್ಸವ ಆಗಬೇಕು ಎಂದರು.ಕಾರ್ಯಕ್ರಮದಲ್ಲಿ ಕರೋಕೆ ಗಾಯನ ಹಾಗು ಯಕ್ಷಗಾನ, ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ ಹಾಗು ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ಆರೀಪ್ ಹೆಚ್ ಎಂ, ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ಹೆಚ್, ಹಿರಿಯ ಉಪಾಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ದಾನಪ್ಪ ಡಿಸಿ, ಗೌರವ ಕಾರ್ಯದರ್ಶಿ ಸತ್ಯನಾರಾಯಣ, ರವಿಕುಮಾರ್ ಜಂಟಿ ಕಾರ್ಯದರ್ಶಿ, ಖಜಾಂಚಿ ಚನ್ನ ಕೇಶವ, ಜಂಟಿ ಖಜಾಂಚಿ ಸೆಲ್ವಕುಮಾರ್, ಸಾಂಸ್ಕೃತಿಕ ಕಾರ್ಯಕ್ರಮಗಳ ಉಪ ಸಮಿತಿ ಛೇರ್ಮನ್ ಅಶೋಕ್ ಕೆಹೆಚ್ ಮತ್ತಿತರರು ಸಂಘದ ಸದಸ್ಯರು ಭಾಗವಹಿಸಿದ್ದರು.