ಬೆಂಗಳೂರು: ಲೋಕಸಭೆ ಚುನಾವಣಾ ಸಂಬಂಧ ಬಿಜೆಪಿಯಿಂದ ಸ್ಪರ್ಧಿಸಲು ಪ್ರಮುಖರ ನಡುವೆ ಪೈಪೋಟಿ ಹೆಚ್ಚಾಗ ತೊಡಗಿದೆ.
ಟಿಕೆಟ್ ಆಕಾಂಕ್ಷಿಗಳು ಘಟಾನುಘಟಿಗಳೇ ಆಗಿದ್ದು, ಟಿಕೆಟ್ ಪಡೆಯಲು ತೀವ್ರ ಕಸರತ್ತು ನಡೆಸತೊಡಗಿದ್ದಾರೆ.
ಧಾರವಾಡ ಲೋಕಸಭಾ ಟಿಕೆಟ್ಗಾಗಿ ಜಗದೀಶ್ ಶೆಟ್ಟರ್ ಬೇಡಿಕೆಯಿಡಲು ಮುಂದಾಗಿದ್ದರೆ ಹಾವೇರಿ ಟಿಕೆಟ್ ಪುತ್ರನಿಗೆ ಕೊಡಿಸಲು ಕೆ.ಎಸ್. ಈಶ್ವರಪ್ಪ ದಾವಣಗೆರೆ ಲೋಕಸಭಾ ಟಿಕೆಟ್ಗಾಗಿ ಎಂ.ಪಿ. ರೇಣುಕಾಚಾರ್ಯ ಲಾಬಿ ನಡೆಸಿದ್ದಾರೆ.
ಜಗದೀಶ್ ಶೆಟ್ಟರ್ ಪರ ಬ್ಯಾಟಿಂಗ್ ಮಾಡಲು ಯಡಿಯೂರಪ್ಪರ ನಿವಾಸಕ್ಕೆ ಮಾಜಿ ಶಾಸಕ ಶಂಕರ್ಪಾಟೀಲ್ ಮುನೇನಕೊಪ್ಪ ಭೇಟಿ ನೀಡಿದ್ದಾರೆ.ಇತ್ತ ಯಡಿಯೂರಪ್ಪ, ವಿಜಯೇಂದ್ರರ ಮುಂದೆ ತಮ್ಮದೇ ವಾದ ಮಂಡನೆ ಮುಂದಿಟ್ಟಿದ್ದಾರೆ. ಇವರ ಜೊತೆಗೆ ಮಾಜಿ ಮುರುಗೇಶ್ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡ ಉಪಸ್ಥಿತರಿದ್ದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮುರುಗೇಶ್ ನಿರಾಣಿ ಸಹ ತಮ್ಮದೇ ಆದ ರೀತಿಯಲ್ಲಿ ಟಿಕೆಟ್ಗಾಗಿ ಯತ್ನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಭಾಗಿಯಾಗಿದ್ದರು ಎಂದು ಹೇಳಲಾಗಿದೆ.