ಮೈಸೂರು: ಜಿಲ್ಲೆಯಾದ್ಯಂತ ಕೆಲ ಮತ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವುದನ್ನು ಕಂಡು, ನೂರಾರು ಮಂದಿ ಮತದಾರರು ನಿರಾಶೆಯಿಂದ ಶಾಪ ಹಾಕುತ್ತಾ ಮನೆಗೆ ವಾಪಸ್ ತೆರಳುತ್ತಿದ್ದ ದೃಶ್ಯಗಳು ಮೈಸೂರು ನಗರದಲ್ಲಿ ಹಲವು ಮತಗಟ್ಟೆಗಳಲ್ಲಿ ಕಂಡುಬಂತು.
ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಚಾಮರಾಜ ಜೋಡಿ ರಸ್ತೆಯಲ್ಲಿ ರುವ ಅಂಬಲೆ ಆಣ್ಣಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಮತಗಟ್ಟೆ ಸಂಖ್ಯೆ 134) ಮತ್ತು ಚಾಮರಾಜ ಕ್ಷೇತ್ರದ ವಾರ್ಡ್ ನಂ 25 ಕೈಲಾಸಪುರಂ ಬೂತ್ ಸಂಖ್ಯೆ 194. 196. 197. ಹಾಗೂ ಎನ್ ಆರ್ ಕ್ಷೇತ್ರದ ಗಾಂಧಿನಗರ ಅದಿಜಾಂಬವ ಶಾಲೆಯ 134. 135. 136. ಸೇರಿದಂತೆ ರಾಜೀವ್ ನಗರ.
ಉದಯಗಿರಿ. ಕುಂಬಾರ ಕೊಪ್ಪಲು ಹೀಗೆ ಹಲವೆಡೆ ಮತದಾನ ಮಾಡಲು ಸಾಧ್ಯವಾಗದೆ ಬೇಸರದಿಂದ ಮನೆಗೆ ವಾಪಸ್ಸಾದರು, ಮತದಾನ ಗುರುತಿನ ಚೀಟಿ ಇದೆ, ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ. ಪ್ರತಿ ಬಾರಿ ಇದೇ ಮತಗಟ್ಟೆಯಲ್ಲಿ ಮತ ಹಾಕುತ್ತಿದ್ದೇವೆ. ಆದರೆ ಈ ಬಾರಿ ಬೇರೆ ಕಡೆ ಇದೆ ಎನ್ನುತ್ತಿದ್ದಾರೆ. ಆದರೆ ಅಲ್ಲಿಗೂ ಹೋಗಿ ಪರಿಶೀಲನೆ ನಡೆಸಿದರೆ ನಮ್ಮ ಹೆಸರಿಲ್ಲ. ಅಧಿಕಾರಿಗಳು ಬೇಕಂತಲೇ ಈ ರೀತಿ ಮಾಡಿದ್ದಾರೆ ಎಂದು ಎನ್ ಆರ್ ಕ್ಷೇತ್ರದ ಮತದಾರರಾದ ರಮೇಶ್.
ನಂದಿನಿ. ಉಸ್ಮಾನ್ ಇಂದು ಸಂಜೆ ವರದಿಗಾರರೊಂದಿಗೆ ಚುನಾವಣಾ ಅಧಿಕಾರಿಗಳ ವಿರುದ್ಧ ದೂರಿದರು, ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ಹೆಸರಿದೆ ಆದರೆ ಬದುಕಿರುವವರ ಹೆಸರಿಲ್ಲ. ಚುನಾವಣಾ ಅಧಿಕಾರಿಗಳದ್ದು, ಪ್ರತಿ ವರ್ಷ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಕಳೆದ 40 ವರ್ಷದಿಂದ ಮತ ಹಾಕುತ್ತಿರುವ ನಮ್ಮ ಹೆಸರೇ ಈಗ ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಚೆನ್ನಕೇಶವ ಮೂರ್ತಿ ಕಿಡಿಕಾರಿದರು.
ಬೆಳಗ್ಗೆಯಿಂದ ಸಂಜೆಯವರೆಗೂ ಸುಮಾರು 200ಕ್ಕೂ ಹೆಚ್ಚು ಜನರು ಮತಗಟ್ಟೆಗೆ ಬಂದು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ವಾಸ್ ಹೋಗಿದ್ದಾರೆ. ಹಲವರ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿಯೇ ಈ ರೀತಿ ಆಗಿರೋದು ಹೆಚ್ಚು ಎಂದು ಪಕ್ಷವೊಂದರ ಬೂತ್ ಏಜೆಂಟ್ ಮಾಹಿತಿ ನೀಡಿದರು.
Leave a Review