ಗೌರಿಬಿದನೂರು: ಮಹಾತ್ಮಗಾಂಧೀಜಿ ಅವರು ರಾಮ ರಾಜ್ಯದ ಕನಸನ್ನು ಕಂಡಿದ್ದರು, ಅವರ ಕನಸು ನನಸಾಗಿಸುವಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ, ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನರ ಭಾವನಗೆಗಳಿಗೆ ಧಕ್ಕೆ ತರುವ ಹುನ್ನಾರ ಮಾಡುತ್ತಿದೆ ಎಂದು ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ವಿಷಾದ ವ್ಯಕ್ತ ಪಡಿಸಿದರು.
ತಾಲೂಕಿನ ವಿದುರಾಶ್ವತ್ಥದ ಎನ್.ಸಿ.ನಾಗಯ್ಯರೆಡ್ಡಿ ಸಭಾಂಗಣದಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮಿತಿ, ಕರ್ನಾಟಕ ರ್ವೋದಯ ಮಂಡಲ, ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿ-ಸರ್ವೋದಯ ವಿಚಾರ ಚಿಂಥನ-ಮಂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧೀಜಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದ.
ಅವರು,ಗಾಂಧೀಜಿಯವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಮ್ಮಿಕೊಂಡಿದ್ದ ಚಳುವಳಿಗಳು , ಅವರ ಆದರ್ಶ, ಧ್ಯೋಯೋದ್ದೇಶಗಳು ಯುವಕರಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ, ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನು ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕಿದೆ ಎಂದರು. ಐತಿಹಾಸಿ ಕ್ಷೇತ್ರ ವಿದುರಾಶ್ವತ್ಥದಲ್ಲಿ ವೀರಸೌಧ ನಿರ್ಮಾಣ ಮಾಡಿ ಸ್ವಾತಂತ್ರ ಹೋರಾಟದ ಚಿತ್ರಪಟ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗಿದ್ದು, ಅದೇ ರೀತಿ ಗಾಂಧೀಜಿಯವರ ಜೀವನ ಚರಿತ್ರೆಯ ಚಿತ್ರಪಟ ಗ್ಯಾಲರಿ ನಿರ್ಮಾಣ ಮಾಡಲಾಗುವುದು, ನಮ್ಮ ಮುಂದಿನ ಪೀಳಿಗೆಗೆ ಸ್ವಾತಂತ್ರ ಹೋರಾಟದ ಕುರುಹುಗಳನ್ನು ತಿಳಿಸುವ ಉದ್ದೇಶ ಇದಾಗಿದೆ ಎಂದ ಅವರು ಸಾಹಿತಿ ದಿವಂಗತ ಬಿ.ಜಿ.ಗಂಗಾಧರಮೂರ್ತಿಯವರ ಕನಸು ಸಹ ಇದಾಗಿತ್ತು ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾ ಡಾ.ರಮೇಶ್ ಚಂದ್ರ ದತ್ತ ಸಂಪೂನ್ಮೂಲ ವ್ಯಕ್ತಿಯಾಗಿ ಮಹಾತ್ಮಗಾಂಧೀಜಿಯವರ ಹೋರಾಟದ ಹಾದಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಶಾಂತಿ ಹೋರಾಟದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ವಿದುರಾಶ್ವತ್ಥ ಸ್ವಾತಂತ್ರ್ಯ ಸ್ಮಾರಕ ಸಮಿತಿ ಸದಸ್ಯೆ ಡಾ.ಸಿ.ನಾಗರತ್ನ ಮಾತನಾಡಿ ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದೇ ಬಿಂಬಿತವಾಗಿರುವ ವಿದುರಾಶ್ವತ್ಥ ಕ್ಷೇತ್ರವನ್ನು ವೀರಸೌಧ, ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮರ ಸ್ಮಾರಕ ಅಭಿವೃದ್ಧಿ ಮಾಡಿ ಸಾರ್ವಜನಿಕರಿಗೆ ಲೋಕಾರ್ಪಣೆಗೊಳಿಸಲಾಗಿದ್ದು, ಇದರಿಂದ ಸ್ವಾತಂತ್ರ್ಯದ ಮಹತ್ವನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಎಸ್.ಪತ್ರಿ, ದೊಡ್ಡಕುರುಗೋಡು ಗ್ರಾ.ಪಂ. ಅಧ್ಯಕ್ಷ ಶಿವಶಂಕರಪ್ಪ, ಉಪಾಧ್ಯಕ್ಷೆ ನಾಗಮ್ಮ, ದೆಹಲಿಯ ಗಾಂಧೀ ಸ್ಮøತಿ ಮತ್ತು ದರ್ಶನ ಸಮಿತಿ ಸದಸ್ಯ ಸುರೇಶ್ ಕಲಘಟಗಿ,ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ವಿದುರಾಶ್ವತ್ಥ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮರಿರಾಜು, ದೇವಾಲಯ ಸಮಿತಿ ಅಧ್ಯಕ್ಷ ಎನ್.ಎಂ.ಚಿನ್ನಪ್ಪರೆಡ್ಡಿ, ಮುಂತಾದವರು ಭಾಗವಹಿಸಿದ್ದರು.
ಶ್ರಮದಾನ: ಕಾರ್ಯಕ್ರಮದ ನಂತರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ಶ್ರಮದಾನ ಮಾಡಲಾಯಿತು.