ಬೆಂಗಳೂರು: ನಮಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯದಲ್ಲಿ ಸುಭದ್ರ ಸರ್ಕಾರವಿದೆ, ಕಾಂಗ್ರೆಸ್ ಬಲಿಷ್ಟವಾಗಿದೆ ಎಂದು ಸಮಾಜಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಅಹಿಂದ ಸಮಾವೇಶ ಆಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜ.೫ರಂದು ಕುಂಬಾರರ ಸಮಾವೇಶ ಆಯೋಜನೆ ಆಗಿದೆ. ಆ ಸಮಾವೇಶಕ್ಕೆ ಸಿಎಂ ಹಾಗೂ ನಾನು ಹೋಗುತ್ತೇವೆ. ಅಹಿಂದ ಸಮಾವೇಶ ಮಾಡಿ ಎಂದು ಯಾರಿಗೂ ಹೇಳಿಲ್ಲ. ಸಂಘಟನೆಯವರಿಗೆ ಮಾಡಬೇಡಿ ಎಂದು ಹೇಳಲು ಆಗಲ್ಲ ಎಂದಿದ್ದಾರೆ.
ಸಿದ್ದರಾಮಯ್ಯಗೆ ರಾಜ್ಯಾದ್ಯಂತ ಸಂಘಟನೆಗಳ ಬೆಂಬಲವಿದೆ. ಕಾಂಗ್ರೆಸ್ ಸರ್ಕಾರ ಬರಲು ಸಂಘಟನೆಗಳ ಸಹಕಾರವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮಲ್ಲಿ ಯಾವುದೇ ಗೊಂದಲವಿಲ್ಲ ಮೈಸೂರಿನಲ್ಲಿ ಜ. ೫ರಂದು ಅಹಿಂದ ಸಮಾವೇಶ: ಎಚ್.ಸಿ. ಮಹದೇವಪ್ಪ



