ಬೆಂಗಳೂರು: ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ಗೆ ಬಂದರೆ ಅಭ್ಯಂತರ ಇಲ್ಲ. ಆದರೆ ಟಿಕೆಟ್ ವಿಚಾರದಲ್ಲಿ ಕೆಲ ಮಾನದಂಡ ಅನ್ವಯವಾಗಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಒಬ್ಬ ಮುಖಂಡ ಬರುತ್ತಾರೆಂದರೆ ಅದನ್ನೇ ನಾವು ನಿರೀಕ್ಷೆ ಮಾಡುತ್ತೇವೆ. ಮುದ್ದಹನುಮೇಗೌಡ ನನ್ನನ್ನು ಮತ್ತು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿದ್ದರು ಎಂದು ತಿಳಿಸಿದ್ದಾರೆ.ಹಾವೇರಿ ನೈತಿಕ ಪೊಲೀಸ್ ಗಿರಿ ಪ್ರಕರಣ ಬಗ್ಗೆ ಮಾತನಾಡಿದ ಪರಮೇಶ್ವರ್, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ರೇಪ್ ಬಗ್ಗೆ ಮೊದಲೇ ದೂರು ಕೊಟ್ಟಿಲ್ಲ. ನಿರ್ಲಕ್ಷ್ಯ ಮಾಡುವಂತದ್ದೇನಿಲ್ಲ.
ಯಾವುದೇ ಪ್ರಕರಣ ಇರಲಿ, ಯಾರನ್ನೇ ರಕ್ಷಣೆ ಮಾಡುವಂತದ್ದಾಗಲಿ, ಹಗುರವಾಗಿ ತೆಗೆದುಕೊಳ್ಳುವಂತಹದ್ದೇನು ಇಲ್ಲ ಎಂದರು.
ಕೆಲವು ಆರೋಪಿಗಳನ್ನು ಕೂಡಲೇ ಬಂಧಿಸಿದ್ದಾರೆ. ದೂರು ಕೊಟ್ಟಿದ್ದು ಸುಳ್ಳಾ, ಇಲ್ಲವಾ ಅನ್ನೊದನ್ನ ನೋಡಿ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಇಂತಹ ಪ್ರಕರಣದಲ್ಲಿ ನಿರ್ಲಕ್ಷ ಮಾಡಲ್ಲ. ಶಿರಿಸಿಯಿಂದ ಬಂದು ಅಲ್ಲಿ ರೂಮ್ ಮಾಡಿದ್ದರು.
ಬೇರೆಯವರ ಜೊತೆ ಅನೈತಿಕವಾಗಿ ಇದ್ದರ ಅಂತ ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡುವಾಗ ನಮಗೆ ರೇಪ್ ಮಾಡಿದ್ದಾರೆ ಎಂದು ಆಮೇಲೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಎಲ್ಲಾ ಮೆಡಿಕಲ್ ಟೆಸ್ಟ್ ನಡೆಯಲಿದೆ ಎಂದರು.