ಬೆಂಗಳೂರು : ಬೆಂಗಳೂರಲ್ಲಿ ೭ ಕೋಟಿಗೂ ಅಧಿಕ ದರೋಡೆ ನಡೆದಿದೆ. ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಎಟಿಎಂ ಯಂತ್ರಗಳಿಗೆ ಹಣ ತುಂಬಿಸಲು ಕೊಂಡೊಯ್ಯುತ್ತಿದ್ದ
ವಾಹನದಿಂದ ೭.೧೧ ಕೋಟಿ ರೂಪಾಯಿ ದೋಚಿದ್ದಾರೆ. ನಗರದ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ದುಷ್ಕೃತ್ಯ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಜಿ ಪರಮೇಶ್ವರ್, ದರೋಡೆಕೋರರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದಂತಹ ದರೋಡೆಯಲ್ಲಿ ಈಗಾಗಲೇ ಪೊಲೀಸ್ ಅಧಿಕಾರಿಗಳು ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ.
ದರೋಡೆಕೋರರು ಕರ್ನಾಟಕದವರಾ ಬೇರೆ ರಾಜ್ಯದವರ ಹಾಗೂ ಯಾವ ವಾಹನ ಬಳಸಿದ್ದಾರೆ, ಅದರ ಕುರಿತು ತನಿಖೆ ನಡೆಸುತ್ತಿದ್ದಾರೆ. ದರೋಡೆಕೋರರು ಯಾವ ಕಾರಿಗೆ ನಂಬರ್
ಪ್ಲೇಟ್ ಬಳಸಿದ್ದರೊ ಅದು ಸಹ ಡುಪ್ಲಿಕೇಟ್ ಆಗಿದೆ.
ಅವರು ಯಾವ ವಾಹನದಲ್ಲಿ ತೆರಳಿದ್ದರೋ ಗೊತ್ತಿಲ್ಲ ದರೋಡೆಗೆ ಬಳಸಿದ ಕಾರು ಬೇರೆ ಅವರು ಅಲ್ಲಿಂದಪರಾರಿಯಾಗಿರುವಾಗ ಬಳಸಿದ ಕಾರೆ ಬೇರೆ. ಸದ್ಯ ಪೊಲೀಸರು ದರೋಡೆಕೋರರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿ ದರೋಡೆಕೋರರನ್ನು ಹಿಡಿಯುವುದುಗ್ಯಾರಂಟಿ. ಯಾವುದೇ ಕಾರಣಕ್ಕೂ ದರೋಡೆಕೋರರನ್ನು ಬಿಡುವ ಮಾತೇ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಗೃಹ ಸಚಿವ.ಜಿ ಪರಮೇಶ್ವರ ತಿಳಿಸಿದರು



