ಬೆಂಗಳೂರು : ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಿಬೆಲೆ ರಸ್ತೆಯಲ್ಲಿ ವಾಸವಿರುವ ಅಶೋಕ್ ಯಾದವ್ ಎಂಬುವರ ಮನೆಯ ಬೀಗ ಮುರಿದ ಅಪರಿಚಿತ ವ್ಯಕ್ತಿಗಳು ಅಂದಾಜು ೨೫ ಲಕ್ಷ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ಒಂದು ಲಕ್ಷ ರೂಪಾಯಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಶೋಕ್ ಯಾದವ್ ಅವರು ಕೆಲಸದ ನಿಮಿತ್ತ ಹೊರಗಡೆ ಹೋಗಿರುವ ಸಮಯದಲ್ಲಿ ಮನೆ ಬೀಗ ಮುರಿದ ಅಪರಿಚಿತ ವ್ಯಕ್ತಿಗಳು ೩ ಕೆಜಿ ಬೆಳ್ಳಿ ಆಭರಣ, ೩೫೦ ಗ್ರಾಂ ಚಿನ್ನಾಭರಣ ಹಾಗೂ ಒಂದು ಲಕ್ಷ ರೂಪಾಯಿ ನಗದು ದೋಚಿಕೊಂಡು ಹೋಗಿರುತ್ತಾರೆ ಎಂದು ಸರ್ಜಾಪುರ ಪೊಲೀಸರಿಗೆ ದೂರು ನೀಡಿರುತ್ತಾರೆ.
ಮತ್ತೊಂದು ಕಳ್ಳತನ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡುಗೆಹಳ್ಳಿ ಬಳಿ ದೀಕ್ಷಾ ಅವರ ಮನೆಯ ಬೀಗ ಮುರಿದು ೧೨ ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಮಾಡಿಕೊಂಡು ಹೋಗಿರುತ್ತಾರೆ. ೧೧೦ ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೀಕ್ಷಾ ರವರು ದೂರು ಸಲ್ಲಿಸಿರುತ್ತಾರೆ.



