ಕನಕಪುರ: ಈ ಚುನಾವಣೆ ಸ್ವಾಭಿಮಾನ ಹಾಗೂದೇಶದ ಸುರಕ್ಷತೆಯ ಚುನಾವಣೆ ಯಾಗಿದ್ದು ನಿಮ್ಮ ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಮತವನ್ನು ಚಲಾಯಿಸುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್. ಡಿ. ಎ.ಮೈತ್ರಿ ಅಭ್ಯರ್ಥಿ ಸಿ. ಎನ್. ಮಂಜುನಾಥ್ ತಿಳಿಸಿದರು
ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೂಡಿ ನಗರದ ಬೂದಿಕೇರಿ ಶ್ರೀ ರಾಮ ಕಾಲೋನಿ ಯಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರದ ನಗರದ ಮೇಳೆಕೋಟೆ,
ಅಂಬೇಡ್ಕರ್ ಕಾಲೋನಿ ಸೇರಿದಂತೆ ಸಾತನೂರು,,ದೊಡ್ಡಆಲಹಳ್ಳಿ,ಹುಣಸನಹಳ್ಳಿ,ಕೋಡಿಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ಈ ಚುನಾವಣೆ ಬಹಳ ಅತ್ಯಂತ ಮಹತ್ವದ ಚುನಾವಣೆಯಾಗಿದ್ದು ದೇಶದ ಅಭಿವೃದ್ಧಿಯ ಜೊತೆಗೆ ಭದ್ರತೆಗಾಗಿ ನಡೆಯುತ್ತಿದ್ದು ನನ್ನ ವೃತ್ತಿ ಜೀವನದಲ್ಲಿ ಯಾರಿಗೂ ನೋವಾಗದಂತೆ ಕರ್ತವ್ಯವನ್ನು ನಿರ್ವಹಿಸಿದ್ದು ನನಗೆ ತೃಪ್ತಿ ತಂದಿದೆ ಎಂದರು.
ನಾನು ಎಂಬುದು ಅಹಂಕಾರ ನಾವು ಎನ್ನುವುದು ಅಲಂಕಾರ ಎಂಬಂತೆ ಆಸ್ಪತ್ರೆಯ ವೈದ್ಯರ ಸಹಕಾರದಿಂದ ಸುಮಾರು 75 ಲಕ್ಷ ಹೃದಯ ಚಿಕಿತ್ಸೆ ಮಾಡಿ ಅವರ ಜೀವ ಹಾಗೂ ಜೀವನ ವನ್ನು ಉಳಿಸಿರುವ ತೃಪ್ತಿಯಿದ್ದು ನನ್ನ ಕೈಲಾದಷ್ಟು ಬಡವರು, ಕೂಲಿ ಕಾರ್ಮಿಕರು,ರೈತರ ಜೀವ ಕಾಪಾಡಿರುವ ಆತ್ಮತೃಪ್ತಿಯಿದೆ, ರಾಜಕೀಯ ನನಗೆ ಹೊಸ ದಿರಬಹುದು ಆದರೆ ಜನ ಸಾಮಾನ್ಯರ ಒಡನಾಟ ನನಗೆ ಬಹಳ ಹತ್ತಿರವಾದುದು,ರಾಜಕೀಯದಿಂದ ನಾನು ಏನನ್ನ ಸಂಪಾದಿಸಲು ಬಂದಿಲ್ಲ ಆದರೆ ದೇಶದ ಹಾಗೂ ಕನ್ನಡ ನಾಡಿನ ಜನರ ಆರೋಗ್ಯ ಸುಧಾರಣೆಗೆ ಏನಾದರೂ ಒಂದು ಶಾಶ್ವತ ಪರಿಹಾರ ಒದಗಿಸ ಬೇಕು ಎಂಬುದು ನನ್ನ ಬಯಕೆಯಾಗಿದೆ,ಕ್ಷೇತ್ರದ ಮತದಾರ ಬಂಧುಗಳು ನನಗೆ ಒಂದು ಬಾರಿ ನಿಮ್ಮ ಸೇವೆ ಅವಕಾಶ ಆರೋಗ್ಯ ಕ್ಷೇತ್ರ ದಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸುತ್ತೇನೆ ನನ್ನ ಗೆಲುವು ನಿಮ್ಮ ಗೆಲುವುಗಾಲಿದೆ ಎಂದರು.
ಇಡೀ ಜಗತ್ತೇ ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತು ಕೊಂಡ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ದೇಶದ ಜನರ ಆರೋಗ್ಯಕ್ಕೆ ಯಾವುದೇ ತೊಂದರೆ ಆಗದಂತೆ ಉಚಿತವಾಗಿ ಲಸಿಕೆಯನ್ನು ನೀಡಿ ದ್ದಲ್ಲದೆ ಜನರು ಭಯಭೀತ ರಾಗದಂತೆ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವಂತಹ ಕೆಲಸವನ್ನು ಮಾಡಿ ಪ್ರತಿ ತಿಂಗಳು ಐದು ಕೆ.ಜಿ ಉಚಿತವಾಗಿ ಪಡಿತರ ಅಕ್ಕಿಯನ್ನು ನೀಡುವ ಮೂಲಕ ಅವರ ಜೀವ ಹಾಗೂ ಜೀವವನ್ನು ಉಳಿಸುವಂತ ಕೆಲಸವನ್ನು ಮಾಡಿದ್ದಲ್ಲದೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿಯೊಬ್ಬ ರೈತನ ಬ್ಯಾಂಕ್ ಖಾತೆಗೆ ನೇರವಾಗಿ ಆರು ಸಾವಿರ ರೂಪಾಯಿಗಳನ್ನ ಹಾಕಿದ್ದು ಇದರ ಜೊತೆಗೆ ಜನ ಔಷಧಾಲಯ ಮೂಲಕ ಕಡಿಮೆ ಬೆಲೆಗೆ ಔಷದಿ ದೊರೆಯುವಂತೆ ಮಾಡಿರುವುದ್ದನ್ನ ಕ್ಷೇತ್ರದ ಜನ ಎಂದೂ ಮರೆಯಬಾರದು ಎಂದರು.
ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಮಾತನಾಡಿ ಈ ಚುನಾವಣೆಯಲ್ಲಿ ಸರಳ,ಸಜ್ಜನ ವ್ಯಕ್ತಿಯನ್ನು ದೇವೇಗೌಡ ರ ಮಾರ್ಗದರ್ಶನದಲ್ಲಿ ಯಾರು ನಿರೀಕ್ಷೆ ಮಾಡದ ಒಬ್ಬ ಸರಳ ಸಜ್ಜನ ವ್ಯಕ್ತಿಯನ್ನು ಮಾನ್ಯ ಪ್ರಧಾನ ಮಂತ್ರಿಗಳು ನಮ್ಮ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು ಈ ಚುನಾವಣೆ ಧರ್ಮ-ಅಧರ್ಮದ ನಡುವಿನ ಹೋರಾಟವಾಗಿದೆ,ತಮ್ಮ ವೃತ್ತಿ ಜೀವನದಲ್ಲಿ ಲಕ್ಷಾಂತರ ಜನರ ಪ್ರಾಣ ಹಾಗೂ ಜೀವನ ವನ್ನು ಉಳಿಸಿರುವ ಸರಳ, ಸಜ್ಜನಿಕೆಯ ವ್ಯಕ್ತಿ ಹಾಗೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದವರಾಗಿದ್ದು ದರ್ಪ, ದೌರ್ಜನ್ಯ, ದಬ್ಬಾಳಿಕೆಯಿಂದಲೇ ಜನರನ್ನು ಬೆದರಿಸಿ, ಎದರಿಸಿ ರಾಜಕೀಯ ನಡೆಸುತ್ತಿರುವ ವ್ಯಕ್ತಿಬೇಕು ಅಥವಾ ಸಜ್ಜನಿಕೆ ವ್ಯಕ್ತಿ ಬೇಕು ಜನರೇ ತೀರ್ಮಾನಿ ಸಬೇಕಾಗಿದೆ ಎಂದರು.
ಕಳೆದ ಹನ್ನೆರಡು ವರ್ಷ ಅವಧಿಯಲ್ಲಿ ಡಿ.ಕೆ ಸುರೇಶ್ ಸಂಸದ ರಾದ ಅವಧಿಯಲ್ಲಿ ಅವರು ಹಾಗೂ ಅವರ ಹಿಂಬಾಲಕರು ನಡೆದುಕೊಂಡ ರೀತಿಯಿಂದ ಬಹಳಷ್ಟು ಜನರು ಬೇಸತ್ತಿದ್ದಾರೆ,ಚುನಾವಣೆ ಅವರು ಅಂದುಕೊಂಡ ರೀತಿಯಲ್ಲಿ ತೋಳು ಬಲ,ಹಣದ ಬಲ ಮತದಾರರಿಗೆ ಆಮಿಷವೊಡ್ಡಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ಕೊಂಡಿದ್ದರೆ ಅದು ಅವರ ಭ್ರಮೆಯಾಗಿದ್ದು ಅವೆಲ್ಲವೂ ಮೀರಿದಂತೆ ಚುನಾವಣೆಯು ನಡೆಯಲಿದೆ, ಜನರೇ ಸ್ವಯಂಪ್ರೇರಿತರಾಗಿ ಬೀದಿಗೆ ಬಂದು ಮತ ಕೇಳುತ್ತಿರುವುದು ನೋಡಿದರೆ ನಾವು ಗೆಲುವು ಸಾಧಿಸು ವುದರಲ್ಲಿ ಯಾವುದೇ ಅನುಮಾನವಿಲ್ಲ,ಡಿಕೆ ಸಹೋದರ ರು ರಾಜಕಾರಣಕ್ಕೆ ಬಂದ ಮೇಲೆ ಸ್ವಾರ್ಥದಿಂದ ಎಷ್ಟು ಪ್ರಬಲ ರಾಗಿದ್ದಾರೆ ಎಂದರೆ ಸರ್ಕಾರ ಮುಖಾಂತರ ಅವರ ಆಸ್ತಿ ಯನ್ನು ಎಷ್ಟು ವೃದ್ಧಿ ಮಾಡಿಕೊಳ್ಳಬಹುದು ಎಂಬುದನ್ನು ಅರಿತುಕೊಂಡು ಮುಖ್ಯಮಂತ್ರಿಯವರನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು,ಮುಖಂಡರಾದ ಬಾಲನರ ಸಿಂಹಯ್ಯ, ಯುವ ಮುಖಂಡ ಭರತ್ ಬಾಲ ನರಸಿಂಹಯ್ಯ, ಪಂಚಲಿಂಗೇಗೌಡ, ಸಿದ್ಧಮರೀಗೌಡ, ಪುಟ್ಟರಾಜು, ಚಿನ್ನಸ್ವಾಮಿ ಸಮಾಜ ಸೇವಕ ಅನಿಲ್ ಕುಮಾರ್ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಬೊಮ್ಮನಹಳ್ಳಿ ಕುಮಾರ್,ರೈತ ಮೋರ್ಚಾ ಜಿಲ್ಲಾ ಪ್ರ. ಕಾರ್ಯದರ್ಶಿ ನಾಗನಂದ್, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಎಸ್. ಟಿ. ಮೋರ್ಚಾ ಅಧ್ಯಕ್ಷ ಶಿವಮುತ್ತು, ಯುವ ಮೋರ್ಚಾ ಅದ್ಯಕ್ಷ ಸುನೀಲ್, ಶೇಖರ್, ಮಹಿಳಾ ಘಟಕದ ಪವಿತ್ರ, ತಾಹಸೀನಾ ಖಾನ್ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.