ತಿ.ನರಸೀಪುರ: ಇದು ನನ್ನ ಗೆಲುವಲ್ಲ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರು ಮತ್ತು ಕಾರ್ಯಕರ್ತರ ಗೆಲುವು ಎಂದು ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ನೂತನ ಸಂಸದ ಸುನೀಲ್ ಬೋಸ್ ಹೇಳಿದರು.
ಚಾಮರಾಜನಗರ ಕ್ಷೇತ್ರದಿಂದ ಲೋಕಸಭೆಗೆ ಸಂಸದರಾಗಿ ಆಯ್ಕೆಯಾದ ಬಳಿಕ ತಾಲೂಕಿನ ಮೂಗೂರು ಗ್ರಾಮದ ವಿಶ್ವ ಪ್ರಸಿದ್ದಿ ಮೂಗೂರು ಶ್ರೀ ತ್ರಿಪುರ ಸುಂದರಿ ಅಮ್ಮನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ನಂತರ ಮಾತನಾಡಿದ ಅವರು ನನ್ನ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು, ಮುಖಂಡರು ಮತ್ತು ಹಿತೈಷಿಗಳಿಗೆ ಧನ್ಯವಾದಗಳು ತಿಳಿಸಿ ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿರುವ ನಿಮಗೆ ಸದಾ ನಾನು ಆಬಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಬ್ಲಾಕ್ ಅಧ್ಯಕ್ಷ ಎಂ.ಡಿ. ಬಸವರಾಜು, ಮೈಮುಲ್ ನಿರ್ದೇಶಕ ಚಲುವರಾಜು, ಜಿ. ಪಂ. ಮಾಜಿ ಸದಸ್ಯ ಮಂಜುನಾಥ್, ತಾ. ಪಂ. ಮಾಜಿ ಅಧ್ಯಕ್ಷ ಹ್ಯಾಕನೂರು ಉಮೇಶ್, ಗ್ರಾ. ಪಂ. ಮೆದೀನಿ ಕುಮಾರ್, ಗುತ್ತಿಗೆದಾರ ಮೂಗೂರು ಜಯಣ್ಣ, ರಘು, ಸಬೀಲ್, ಅತೀಕ್, ಸುಂದರನಾಯಕ, ಸ್ವಾಮಿಗೌಡ, ಅದಿಬೆಟ್ಟಹಳ್ಳಿ ಮಸಣೇ ಗೌಡ, ಲಕ್ಷ್ಮಣ, ಕನ್ನಹಳ್ಳಿ ಶಿವಕುಮಾರ್, ಬಸವರಾಜು, ಸಾಗರ್, ವಿನಯ್, ಕಾಂಗ್ರೆಸ್ ಕಾರ್ಯಕರ್ತರು ಮುಖಂಡರುಗಳು ಹಾಜರಿದ್ದರು.