ಭಾರತದ ಚಾಂಪಿಯನ್ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಕಳೆದ ೭ ವರ್ಷಗಳಲ್ಲಿ ಇದೇ ಮೊದಲ ಬಾರಿ ತಮ್ಮ ವೃತ್ತಿ ಜೀವನದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಇಷ್ಟೂ
ವರ್ಷಗಳಲ್ಲಿ ಭಾಗವಹಿಸಿದ ಯಾವುದೇ ಕ್ರೀಡಾಕೂಟದಲ್ಲೂ ಅವರು ಪದಕ ಇಲ್ಲದೆ ಹಿಂದುರುಗಿದ ಉದಾಹರಣೆಯೇ ಇಲ್ಲ. ಆದರೆ ಇದೀಗ ಜಪಾನ್ ನ ಟೋಕಿಯೋದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್
ಚಾಂಪಿಯನ್ ಶಿಪ್ ನಲ್ಲಿ ೮ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅವರ ೨೫೬೬ ದಿನಗಳ ಪದಕಗಳ ಓಟ ಅಂತ್ಯಗೊAಡಿದ. ಚಿನ್ನ, ಬೆಳ್ಳಿ, ಕಂಚು ಹೀಗೆ ಯಾವುದೇ ಪದಕವಿಲ್ಲದೆ ಅವರು ಕ್ರೀಡಾಕೂಟ ಮುಗಿಸಿದ್ದಾರೆ.
ಜಪಾನ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರ ಪ್ರದರ್ಶನ ಹೇಳಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ. ಮೊದಲ ಪ್ರಯತ್ನದಲ್ಲಿ ೮೩.೫೬ ಮೀಟರ್ ಎಸೆದ ಅವರು ಎರಡನೇ ಪ್ರಯತ್ನದಲ್ಲಿ ೮೪.೦೩ ಮೀಟರ್ ದೂರ ಎಸೆದರು. ಇದು ಅವರ ಅತ್ಯುತ್ತಮ ಎಸೆತವಾಗಿತ್ತು. ನಂತರದ ಪ್ರಯತ್ನಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಲು
ಸಾಧ್ಯವಾಗಲಿಲ್ಲ. ಮೂರನೇ ಪ್ರಯತ್ನದಲ್ಲಿ ಫೌಲ್ ಆದರು. ನಾಲ್ಕನೇ ಪ್ರಯತ್ನದಲ್ಲಿ ೮೨.೭೫ ಮೀಟರ್ ಎಸೆದರು. ಐದನೇ ಪ್ರಯತ್ನದಲ್ಲಿ ಸಮರ್ಪಕ ಎಸೆತ ಎಸೆಯದ್ದರಿಂದ ರೆಡ್ ಫ್ಲಾ÷್ಯಗ್
ತೋರಿಸಲಾಯಿತು.
ಈ ವರ್ಷದಆರಂಭದಲ್ಲಿ ಅವರು ಟೆನಿಸ್ಪಟು ಹಿಮಾನಿ ಮೋರ್ ಅವರನ್ನು ವಿವಾಹ ಆಗಿದ್ದರು. ವಾಲ್ಕಾಟ್ಗೆ ಚಿನ್ನದ ಪದಕ ಈ ಟೂರ್ನಿಯಲ್ಲಿ ಕೇಶೋರ್ನ್ ವಾಲ್ಕಾಟ್ ೮೮.೧೬ ಮೀ ಎಸೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಆAಡರ್ಸನ್ ಪೀಟರ್ಸ್ ೮೭.೩೮ ಮೀ ಎಸೆದು ಬೆಳ್ಳಿ ಪಡೆದರು. ಅಮೆರಿಕದ ಕರ್ಟಿಸ್ ಥಾಂಪ್ಸನ್ ಕಂಚಿನ ಪದಕ ಪಡೆದರು. ಭಾರತದ ಮತ್ತೊಬ್ಬ ಜಾವೆಲಿನ್ ಪಟು ಸಚಿನ್ ಯಾದವ್ ಉತ್ತಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದರು. ಅವರು ೮೬.೨೭ ಮೀಟರ್ ದೂರ ಎಸೆದರು. ಇನ್ನು ಕೇವಲ
೮೨.೨೭ ಮೀಟರ್ ಮಾತ್ರ ಎಸೆಯುವಲ್ಲಿ ಸಫಲರಾದ ಪಾಕಿಸ್ತಾನದ ಅರ್ಶದ್ ನದೀಂ ಅವರು ೧೦ನೇ ಸ್ಥಾನಕ್ಕೆ ಕುಸಿದರು.



