ಕೆಲವೊಮ್ಮೆ ಕೆಲವರ ಗೆಲುವಿನ ಮಹತ್ವ ಏನೆಂಬುದು ತಿಳಿಯಬೇಕಾದರೆ ಒಮ್ಮೆಯಾದರೂ ಸೋಲಬೇಕಾಗುತ್ತದಂತೆ! ಉಳಿದವರ ಸಂಗತಿ ಗೊತ್ತಿಲ್ಲ, ಆದರೆ ನೀರಜ್ ಚೋಪ್ರಾ ವಿಷಯದಲ್ಲಂತೂ ಅದು ನೂರಕ್ಕೆ ನೂರರಷ್ಟು ನಿಜ. ಈತನ ಗೆಲುವಿನ ಮಹತ್ವ ಏನು ಎಂಬುದು ಗೊತ್ತಾಗಿದ್ದು ಮೊನ್ನೆ ಟೋಕಿಯೋದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ೮ನೇ ಸ್ಥಾನ ಬಂದಾಗಲೇ!
ಸುಮ್ಮನೇ ನೀರಜ್ ಚೋಪ್ರಾ ಅವರ ಜೀವನ ಸಾಧನೆ ಏನೆಂದು ಕೇಳಿದರೆ ೨೦೨೧ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಗಳಿಸಿದ ಸ್ವರ್ಣ ಪದಕ ಎಂಬುದನ್ನು ಚಿಕ್ಕ ಮಗುವೂ ಹೇಳೀತು. ಆ ಮೇಲೆ ೨೦೨೪ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಎಂಬುದನ್ನೂ ಅದರ ಜೊತೆಗೆ ಉಸುರೀತು. ಅದನ್ನು ಹೊರತುಪಡಿಸಿ ನೀರಜ್ ವಿಶ್ವ ಚಾಂಪಿಯನ್ ಶಿಪ್ ಗೆದ್ದಿದ್ದಾರೆಂದು ಹೇಳಿಬಿಡಬಹುದು. ಇವೇನೂ ಸಣ್ಣ ಸಾಧನೆಗಳೇನಲ್ಲ. ಇಷ್ಟು ಸಾಕು ನೀರಜ್ ಸಾಮರ್ಥ್ಯ ಎತ್ತಿ ಹಿಡಿಯಲು.
ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಈ ಋತುವನ್ನು ಕೊನೆಗೊಳಿಸಲು ನಾನು ಆಶಿಸಿರಲಿಲ್ಲ. ಎಲ್ಲಾ ಸವಾಲುಗಳ ನಡುವೆಯೂ ಭಾರತಕ್ಕಾಗಿ ನನ್ನ ಅತ್ಯುತ್ತಮ ಪ್ರದಶನ ನೀಡಲು ನಾನು ಬಯಸಿದ್ದೆ ಆದರೆ ಅದು ನನ್ನ ರಾತ್ರಿಯಾಗಿರಲಿಲ್ಲ. ಜಾವೆಲಿನ್ದಂತಕತೆಯಾಗಿರುವ ಅವರ ಕೋಚ್ ಜಾನ್ ಜೆಲೆನ್ಜಿ ಮಾತ್ರ ಈ ಸಾಧನೆಯಲ್ಲಿ ನೀರಜ್ ಅವರಿಂತ ಮುAದಿರುವ ವಿಶ್ವದ ಏಕೈಕ ವ್ಯಕ್ತಿ! ಜೂನ್ ನಲ್ಲಿ ದುಬೈನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ಅನ್ನು ಗೆದ್ದಾಗ ಸೆರ್ಗೆಯ್ ಮಕರೋವ್ ಅವರ ೨೫ ಗೆಲುವುಗಳ ಸಾಧನೆಯನ್ನು ಮೀರಿ ನಿಂತಿದ್ದರು. ಇದು ೨೧ನೇ ಶತಮಾನದ ವಿಶ್ವದಾಖಲೆಯೂ ಹೌದು. ಇನ್ನು ತಮ್ಮ ಕೋಚ್ ನ ಸಾಧನೆಯನ್ನು ಹಿಂದಿಕ್ಕಲು ಅವರಿಗೆ ಬೇಕಿದ್ದುದು ಕೇವಲ ೭ ಗೆಲುವುಗಳಷ್ಟೇ.
ಕಳೆದ ೮ ವರ್ಷಗಳಲ್ಲಿ ಒಮ್ಮೆಯೂ ಕನಿಷ್ಠ ಕಂಚಿನ ಪದಕ ಇಲ್ಲದೇ, ಕಳೆದ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಕನಿಷ್ಠ ಬೆಳ್ಳಿ ಪದಕ ಇಲ್ಲದೇ ಯಾವುದೇ ಕ್ರೀಡಾಕೂಟದಿಂದ ನೀರಜ್ ಚೋಪ್ರಾ ಹಿಂದುರುಗಿಯೇ ಇಲ್ಲ ಎಂದಾದಲ್ಲಿ ಅವರ ಸಾಧನೆ ಯಾವ ಮಟ್ಟದ್ದಾಗಿರಬಹುದೆಂಬುದನ್ನು ಗಮನಿಸಿ. ಬೇರೆ ಯಾವುದೇ ದೇಶದಲ್ಲಿ ನೀರಜ್ ಚೋಪ್ರಾ ಇದ್ದಿದ್ದರೆ ಖಂಡಿತವಾಗಿಯೂ ಅವರು ಅಲ್ಲಿನ ಸೂಪರ್ ಸ್ಟಾರ್ ಅಥ್ಲೀಟ್ ಆಗಿರುತ್ತಿದ್ದರು.
ಇಲ್ಲವಾದರೆ ೨೦೨೩ರಲ್ಲಿ ಅಹ್ಮದಾಬಾದ್ ಏಕದಿನ ವಿಶ್ವಕಪ್ ಅನ್ನು ನೀರಜ್ ಚೋಪ್ರಾ ಅವರು ವೀಕ್ಷಿಸಲು ಆಗಮಿಸಿದಾಗ ಎಷ್ಟೋ ಮಂದಿಗೆ ಈತ ವಿಶ್ವವಿಜಯಿ ಎಂಬುದು ತಿಳಿಯಲೇ ಇಲ್ಲ. ಕ್ರಿಕೆಟ್ ಗುಂಗಿನಲ್ಲೇ ಇದ್ದ ನಮ್ಮ ದೇಶದ ಮಹಾನ್ ಪ್ರಜೆಗಳಿಗೆ ನೀರಜ್ ಪಕ್ಕದಲ್ಲೇ ಹಾದು ಹೋದರೂ ತಿಳಿಯಲೇ ಇಲ್ಲ. ಜನ ಸಾಮಾನ್ಯರಂತೆ ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ನೋಡ ಮನೆಗ ಮರಳಿದರು. ಟಿವಿಯಲ್ಲೊಮ್ಮೆ ಇವರು ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತ ಎಂದು
ಹೇಳಿದ್ದಕ್ಕೆ ಓಹ್, ನೀರಜ್ ಮ್ಯಾಚ್ ನೋಡ್ಲಿಕ್ಕೆ ಬಂದಿದ್ದಾನೆAದು ಎಲ್ಲರಿಗೂ ತಿಳಿಯಿತು.