This is the title of the web page
This is the title of the web page

ಈ ಬಾರಿ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ಮನೆಕಡೆಗೆ ಗ್ಯಾರಂಟಿ: ಎಸ್.ರಘು

ಚಂದಾಪುರ: ಈ ಬಾರಿ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ಮನೆಕಡೆಗೆ ಗ್ಯಾರಂಟಿ ಎಂಬುದಾಗಿ ಬೊಮ್ಮಸಂದ್ರ ಪುರಸಭೆಯ ನಾಮನಿರ್ದೇಶನ ಸದಸ್ಯ ಎಸ್.ರಘು ಭವಿಷ್ಯ ನುಡಿದರು.

ಅವರು ಬೊಮ್ಮಸಂದ್ರ ಪುರಸಭಾ ವ್ಯಾಪ್ತಿಯ ವಿವಿಧ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್ ಪರವಾಗಿ ಬಿಜೆಪಿ ಮುಖಂಡರೊಂದಿಗೆ ಬಿರುಸಿನ ಮನೆ ಮನೆ ಪ್ರಚಾರ ನಡೆಸಿ ಮಾತನಾಡಿದರು. ಆನೇಕಲ್ ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ಅವರ ಕೊಡುಗೆಯು ಕೇವಲ ಶೂನ್ಯವಾಗಿದ್ದು, ನಮ್ಮ ಕೇಂದ್ರದ ಮಂತ್ರಿಆಗಿರುವ ಎ.ನಾರಾಯಣಸ್ವಾಮಿ ಅವರ ನೀಡಿದ ಅಭಿವೃದ್ಧಿಯ ಕೊಡುಗೆಗಳು ಇನ್ನೂ ಹೆಸರು ಹೇಳುತ್ತಿವೆಯೇ ಹೊರತು ಈ ಶಾಸಕರ ಹೊಸದಾಗಿ ಮಾಡಿರುವ ಕಾರ್ಯ ಸಾಧನೆಗಳು ಏನು ಇಲ್ಲ ಎಂಬ ಸತ್ಯವನ್ನು ಮನೆ ಮನೆಗೆ ಹೋಗಿ ಮತದಾರರಿಗೆ ತಿಳಿಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬೊಮ್ಮಸಂದ್ರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.