ಬೆಂಗಳೂರು: ಮಾರ್ಚ್ 14ರಂದು ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿ ನಗರದಲ್ಲಿ ಲಕ್ಷ್ಮಿ ಜ್ಯುವೆಲರ್ಸ್ ಅಂಡ್ ಬ್ಯಾಂಕರ್ಸ್ಗೆ ನಾಲ್ಕು ಜನ ದರೋಡೆಕೋರರು ರಿವಾಲ್ವರ್ ತೋರಿಸಿ ದರೋಡೆ ಮಾಡಲು ಯತ್ನಿಸಿ ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿ ಪರಾರಿಯಾಗಿದ್ದರು.
ಈ ಸಂಬಂಧ ಮೂರು ಜನ ಆರೋಪಿಗಳನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿರುತ್ತಾರೆ.ಮಧ್ಯಪ್ರದೇಶದಲ್ಲಿ ಇವರುಗಳನ್ನು ಬಂಧಿಸಿ ಇವರುಗಳಿಂದ ಮೂರು ರಿವಾಲ್ವರ್ ಮದ್ದು ಗುಂಡುಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಲ್ಕನೇ ಆರೋಪಿಯ ಮೃತಪಟ್ಟಿರುತ್ತಾನೆ ಮತ್ತು ಐದನೇ ಆರೋಪಿಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.
ಇವರುಗಳನ್ನು ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ 13 ದಿನ ಪೊಲೀಸ್ ಕಸ್ಟಡಿಗೆ ನೀಡಿರುತ್ತದೆ