ಬೆಂಗಳೂರು: ಈಶಾನ್ಯ ವಿಭಾಗದ ಪೊಲೀಸರು ಅಮೃತಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆನ್ಲೈನ್ ವೆಬ್ಸೈಟ್ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುತ್ತಾರೆ.
ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದು ಮೂರು ಜನ ಮಹಿಳೆಯರನ್ನು ರಕ್ಷಿಸಿರುತ್ತಾರೆ. ಇವರುಗಳಿಂದ, 13 ಮೊಬೈಲ್, 1 ಸ್ಕೂಟರ್ ಒಂದು ಕಾರು ಮತ್ತು 30,000 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಆರೋಪಿಗಳು ಮಡಿವಾಳ ಮತ್ತು ಕೋರಮಂಗಲದಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿ ದೊರಕಿದೆ.
ಈ ಸಂಬಂಧ ಈಶಾನ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.