ಬೆಂಗಳೂರು : ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಸ್ತಿ ರಸ್ತೆಯಲ್ಲಿ ಆಟೋ ಚಾಲಕ ಅಜಾಗರೂಕತೆಯಿಂದ ಆಟೋ ಚಲಾಯಿಸಿದ ಪರಿಣಾಮ ಚಾಲಕ ಮೃತಪಟ್ಟಿರುತ್ತಾನೆ.40ವರ್ಷದ ರಾಜೇಶ್ ಮೃತಪಟ್ಟರೆ ಕುಮಾರ್ ಹಿಂಬದಿ ಸವಾರನಿಗೆ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುತ್ತಾನೆ ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ರಾತ್ರಿ 9ರ ಸುಮಾರಿಗೆ ಅಪಘಾತ ಸಂಭವಿಸಿರುತ್ತದೆ.ಮತ್ತೊಂದು ಅಪಘಾತ ಪ್ರಕರಣ ನೆಲಮಂಗಲ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯ ರಾಯರ ಪಾಳ್ಯದ ಬಳಿ ನಿಂತಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ ದ್ವಿಚಕ್ರ ಸವಾರ ಅತಿ ವೇಗವಾಗಿ ಚಲಾಯಿಸಿ ಆಯಾ ತಪ್ಪಿ ಡಿಕ್ಕಿ ಹೊಡೆದಾಗ ಹಿಂಬದಿ ಸವಾರ ಮಹಾದೇವಯ್ಯ 80 ವರ್ಷದ ವ್ಯಕ್ತಿ ಮೃತಪಟ್ಟಿರೆ ದ್ವಿಚಕ್ರ ವಾಹನ ಸವಾರ ಗಣೇಶ್ಗೆ ಗಾಯಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾನೆ.ನಿನ್ನೆ ರಾತ್ರಿ 9ರ ಸುಮಾರಿಗೆ ಅಪಘಾತ ಸಂಭವಿಸಿರುತ್ತದೆ ನೆಲಮಂಗಲ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಮತ್ತೊಂದು ಪ್ರಕರಣ ಇಂದು ಬೆಳಿಗ್ಗೆ ಬ್ಯಾಟರಾಯನಪುರ ಮೇಲ್ಸೇತುವೆ ಮೇಲೆ ಈಚರ್ ಸಿಮೆಂಟ್ ಮಿಕ್ಸರ್ ಲಾರಿಗೆ ದ್ವಿಚಕ್ರ ವಾಹನ ಸವಾರ ಹಿಂಬದಿಯಿAದ ಡಿಕ್ಕಿ ಹೊಡೆದುಕೊಂಡು ರಾಜೇಶ್ ಗೌಡ 30 ವರ್ಷ ಮೃತಪಟ್ಟಿರುತ್ತಾನೆ. ಎಪಿಎಂಸಿ ಯಾರ್ಡಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾನೆ, ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



