This is the title of the web page
This is the title of the web page

ಮಿಗ್ ವಿಮಾನ ಅಪಘಾತ: ಮೂವರ ಬಲಿ

ಬಾರ್ಮರ್: ಭಾರತೀಯ ವಾಯುಪಡೆಯ ಮಿಗ್ ವಿಮಾನ ಇಂದು ರಾಜಸ್ಥಾನದಲ್ಲಿ ಪತನವಾಗಿದ್ದು, ಈ ದುರ್ಘಟನೆಯಲ್ಲಿ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದರೆ, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜಸ್ಥಾನದ ಹಮುಮಾನ್ಗಢ ಜಿಲ್ಲೆಯಲ್ಲಿ ಪತನಗೊಂಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿದ್ದು, ದುರ್ಘಟನೆಯಲ್ಲಿ ಮೂರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಅಂತೆಯೇ ವಿಮಾನದ ಪೈಲಟ್ ಸುರಕ್ಷಿತವಾಗಿ ಇಳಿದಿದ್ದು, ರಕ್ಷಣಾ ಕಾರ್ಯಕ್ಕಾಗಿ ಸೇನಾ ಹೆಲಿಕಾಪ್ಟರ್ ಅಪಘಾತದ ಸ್ಥಳಕ್ಕೆ ದೌಡಾಯಿಸಿದೆ.

ಐಎಎಫ್ ಮೂಲಗಳ ಪ್ರಕಾರ ಅಪಘಾತಕ್ಕೀಡಾದ ಮಿಗ್ ವಿಮಾನವು ಸೂರತ್ಗಢದಿಂದ ಟೇಕ್ ಆಫ್ ಆಗಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ಕ್ಷಣಗಳ ಬಳಿಕ ಸಂಪರ್ಕ ಕಡಿತಗೊಂಡಿತ್ತು. ಇದೀಗ ವಿಮಾನ ಪತನವಾಗಿದೆ.