ಬೆಂಗಳೂರು: ಜಾಗತಿಕ ಹೃದಯ ಕವಾಟ ವಲಯದಲ್ಲಿ ನೆಕ್ಸ್ಟ್-ಜೆನ್ ಟಿಎಚ್ವಿ (ಟ್ರಾನ್ಸ್ಕ್ಯಾಥೆಟರ್ ಹಾರ್ಟ್ ವಾಲ್ವ್) ಸರಣಿಯಲ್ಲಿ ಭಾರತದ ಮೆರಿಲ್ನ ಮೈವಾಲ್ ಟಿಎಚ್ವಿಯ ಮಹತ್ತರ ಸಾಧನೆ: ಯುರೋ-ಪಿಸಿಆರ್ 2024 ನಲ್ಲಿ ಯಶಸ್ವಿಯಾಗಿ ಪ್ರಾಥಮಿಕ ಫಲಿತಾಂಶಗಳನ್ನು ಅನಾವರಣಗೊಳಿಸಿದ್ದು, ವೈದ್ಯಕೀಯ ಪ್ರಯೋಗವನ್ನು ಪ್ರತಿಷ್ಠಿತ ಲಾನ್ಸೆಟ್ ಇವರಿಂದ ಮಾನ್ಯತೆ ಪಡೆದು, ಅಂಗೀಕರಿಸಲಾಗಿದೆ.
ಮೆರಿಲ್ ಲೈಫ್ ಸೈನ್ಸಸ್ ನಿಂದ ರೋಚಕ ಸುದ್ದಿ! ಯುರೋ ಪಿಸಿಆರ್ 2024,ಪ್ಯಾರಿಸ್ನಲ್ಲಿ ಲ್ಯಾಂಡ್ಮಾರ್ಕ್ ಪ್ರಯೋಗದ 30 ದಿನಗಳ ಪ್ರಾಥಮಿಕ ಫಲಿತಾಂಶ
ಗಳನ್ನು ಮೇ 15 ರಂದು ಪ್ರಸ್ತುತಪಡಿಸಲಾಯಿತು. ಇಂಟರ್ ವೆನ್ಷನಲ್ ಕಾರ್ಡಿಯಾಲಜಿ ಕ್ಷೇತ್ರದಲ್ಲಿ ಪ್ರಸ್ತುತ ಅಭ್ಯಾಸಗಳನ್ನು ಕ್ರಾಂತಿಕಾರಿಯಾಗಿ ಪರಿವರ್ತಿಸಲು ಸಿದ್ಧವಾಗಿರುವ ಪ್ರಮುಖ ಮೂರು ವೈದ್ಯಕೀಯ ಪ್ರಯೋಗಗಳಲ್ಲಿ ಲ್ಯಾಂಡ್ಮಾರ್ಕ್ ಪ್ರಯೋಗವು ಒಂದು ಎಂದು ಯುರೋ ಪಿಸಿಆರ್ ಗುರುತಿಸಿದೆ.
ಲ್ಯಾಂಡ್ಮಾರ್ಕ್ ಟ್ರಯಲ್ನ ಅಧ್ಯಕ್ಷರು ಮತ್ತು ಅಧ್ಯಯನ ನಿರ್ದೇಶಕರು ಆದ ಪ್ರೊಫೆಸರ್ ಪ್ಯಾಟ್ರಿಕ್ ಸೆರುಯ್ಸ್ ರವರು ಹೇಳಿದಂತೆ “ಮೈವಾಲ್ ಟಿಎಚ್ವಿ ಸರಣಿಗಳು ಹೊಸ ನೆಕ್ಸ್ಟ್-ಜನ್ಟಿಎಚ್ ವಿ ಸಾಧನಗಳಾಗಿವೆ; ಸೇಪಿಯನ್ ಮತ್ತು ಎವಲುಟ್ ಟಿಎಚ್ವಿ ಸರಣಿಗಿಂತ ಕೆಳಶ್ರೇಣಿಯಲ್ಲಿಲ್ಲ. ಮೈವಾಲ್ ಟಿ ಎಚ್ ವಿ ಸರಣಿಯು ಸಾಂಪ್ರದಾಯಿಕ, ಮಧ್ಯಂತರ ಮತ್ತು ಹೆಚ್ಚುವರಿ-ದೊಡ್ಡ ವ್ಯಾಸವನ್ನು ಒಳಗೊಂಡಿರುವ ವಿಶಿಷ್ಟ 1.5 ಒಒ ವ್ಯಾಸದ ಅಳತೆಯನ್ನು ಹೊಂದಿದ್ದು ಅದು ಪ್ರತಿ ರೋಗಿಯ ಮಲ್ಟಿ ಸ್ಲೈಸ್ ಸಿಟಿ ಸ್ಕ್ಯಾನ್-ವ್ಯಾಖ್ಯಾನಿತ ಮಹಾಪಧಮನಿಯ ಕವಾಟದ ಉಂಗುರ ಪ್ರದೇಶಕ್ಕೆ ಹೊಂದಿಕೆಯಾಗುತ್ತದೆ ಮತ್ತು ನಿಖರವಾಗಿ ಹೊಂದಿಕೊಳ್ಳುತ್ತದೆ ಎಂದು ಲ್ಯಾಂಡ್ಮಾರ್ಕ್ ಅಧ್ಯಯನ ತಿಳಿಸುತ್ತದೆ.
ಗ್ಲೋಬಲ್ ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್, ಪ್ರೊ . ಆಂಡ್ರಿಯಾಸ್ ಬೌಂಬಾಚ್ ಅವರು ಹೇಳುವ ಪ್ರಕಾರ, ಮೈವಾಲ್ ಟಿಎಚ್ವಿ ಸರಣಿಯು ಸಮಕಾಲೀನ. ಟಿಎಚ್ವಿ ಸರಣಿಯಂತೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಲ್ಯಾಂಡ್ಮಾರ್ಕ್ ಪ್ರಯೋಗದಲ್ಲಿ ತೋರಿಸಲಾಗಿದೆ. ನಮ್ಮ ರೋಗಿಗಳನ್ನು 10 ವರ್ಷಗಳ ಕಾಲ ಗಮನಿಸಲಾಗುತ್ತದೆ ಮತ್ತು ಮೂರು ಚಿಕಿತ್ಸಾ ವಿದದ ಸಾಧನಗಳಿಂದ ದೀರ್ಘಾವಧಿಯ ಫಲಿತಾಂಶಗಳನ್ನು ನೋಡಲು ಬಯಸುತ್ತೇವೆ ಎಂದರು.
ಮೆರಿಲ್ ಕಾರ್ಪೋರೇಟ್ ಸ್ಟ್ರಾಟಜಿಯ ಹಿರಿಯ ಉಪಾಧ್ಯಕ್ಷರಾದ ಶ್ರೀ ಸಂಜೀವ್ ಭಟ್ ಅವರು ಹಾಜರಿದ್ದರು.