ಬೆಂಗಳೂರು: ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ವಾಟರ್ ಟ್ಯಾಂಕರ್ ಹಿಂದೆ ಬರುವ ಸಮಯದಲ್ಲಿ ಬಾಲಕಿಯ ಮೇಲೆ ಹತ್ತಿಸಿ ಬಾಲಕಿ ಮೃತಳಾಗಿರುತ್ತಾಳೆ.
ಪ್ರಶಾಂತಿ ಎಂಟು ವರ್ಷದ ಬಾಲಕಿ ಆಟವಾಡುತ್ತಿರುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿ ಮೃತಪಟ್ಟಿರುತ್ತಾರೆ.ಬನ್ನೇರುಘಟ್ಟ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದಾಗ ಆಂಬುಲೆನ್ಸ್ ಹೊಡೆದು ಮಹಿಳೆ ಮೃತಪಟ್ಟಿರುತ್ತಾರೆ.ಯಶೋಧ ಬಾಯಿ (40)ಮಹಿಳೆ ರಾಯಲ್ ಬೇಕರಿ ಮುಂದೆ ರಸ್ತೆ ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿರುತ್ತದೆ.
ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೊನ್ನೇನಹಳ್ಳಿ ಗೇಟ್ ಬಳಿ ಕಾರ್ ಕೆಟ್ಟು ನಿಂತ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿಗಳು ಮೂತ್ರ ವಿಸರ್ಜನೆಗೆ ರಸ್ತೆ ದಾಟುವಸಮಯದಲ್ಲಿ ಅಪಘಾತವಾಗಿ ಓರ್ವ ವ್ಯಕ್ತಿ ಮೃತಪಟ್ಟಿರುತ್ತಾನೆ.ನಿನ್ನೆ ಸಂಜೆ ರಾತ್ರಿ ಸುಮಾರು 8:30 ಗಂಟೆ ಸಮಯದಲ್ಲಿ ಹೊಸಕೋಟೆ ರಸ್ತೆಯಲ್ಲಿ ಕಾರಿನಲ್ಲಿದ್ದ ಶೇಕ್ ಪಾರಿಜನ್ (36) ಎಂಬ ವ್ಯಕ್ತಿಗೆ ಎಪಿಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿ ಮೃತನಾಗಿರುತ್ತಾನೆ.