ಬೆಂಗಳೂರು : ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಮೇಲೆ ದ್ವಿಚಕ್ರ ವಾಹನದಲ್ಲಿ ಸೂರಜ್ ಕುಮಾರ್(೨೨)ಮತ್ತು ಮಾನಸಿ(೧೯) ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಆಯಾತಪ್ಪಿ ಮಾನಸಿ ಕೆಳಗೆ ಬಿದ್ದಾಗ, ಬೈಕ್ ಚಲಾಯಿಸುತ್ತಿದ್ದ ಸೂರಜ್ ಸಹ ಕೆಳಗೆ ಬಿದಿದ್ದಾನೆ. ಈ ಸಂದರ್ಭದಲ್ಲಿ ಹಿಂದೆ ಬರುತ್ತಿದ್ದ ಪ್ಯಾಸೆಂಜರ್ ಆಟೋರಿಕ್ಷಾ ಸೂರಜ್ ಮೇಲೆ ಹರಿದ ಪರಿಣಾಮ ಸೂರಜ್ ಮೃತಪಟ್ಟಿರುತ್ತಾರೆ, ಮಾನಸಿಗೆ ಗಾಯಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾಳೆ.
ಸೂರಜ್ ಮೂಲತಃ ರಾಜಸ್ಥಾನದವನು, ಮಾನಸಿ ಬೆಂಗಳೂರಿನ ನಿವಾಸಿಯಾಗಿದ್ದು, ಬಿಕಾಂ ವಿದ್ಯಾರ್ಥಿನಿ ಆಗಿರುತ್ತಾಳೆ. ಮತ್ತೊಂದು ಪ್ರಕರಣ ಸೀತಾರಾಮ ಭಟ್ಟರ ಪಾಳ್ಯದಲ್ಲಿ ಕಾರ್ ಚಾಲಕ ದರ್ಶನ(೧೯) ಕಾರನ್ನು ಅತಿ ವೇಗವಾಗಿ ಮಧ್ಯರಾತ್ರಿ ಮೂರು ಮೂವತ್ತರ ಸುಮಾರಿಗೆ ಚಲಾಯಿಸುತ್ತಿದ್ದ ಸಮಯದಲ್ಲಿ ಆಯಾ ತಪ್ಪಿ ಕಾರ್ ಹಳ್ಳಕ್ಕೆ ಬಿದ್ದು ಮೃತಪಟ್ಟಿರುತ್ತಾನೆ.
ಅಪಘಾತ ರಾತ್ರಿ ಮೂರು ಮೂವತ್ತರ ಸುಮಾರಿಗೆ ಜರುಗಿದೆ ಹಾಗೂ ಕಾರು ಈತನ ಸ್ನೇಹಿತನದಾಗಿರುತ್ತದೆ. ಎರಡು ಅಪಘಾತ ಪ್ರಕರಣಗಳು ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಮತ್ತೊಂದು ಪ್ರಕರಣದಲ್ಲಿ ಟ್ರ್ಯಾಕ್ಟರ್ಗೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪ್ರೇಮ್ ಕುಮಾರ್ ೩೫ ಮತ್ತು ರಮೇಶ ೪೦ ವರ್ಷದ ವ್ಯಕ್ತಿಗಳು ಮೃತಪಟ್ಟಿರುತ್ತಾರೆ.ಇಂದು ಬೆಳಿಗ್ಗೆ ಈ ಅಪಘಾತ ಪ್ರಕರಣ ಮಲ್ಲರ ಬಾಣವಾಡಿ ಬಳಿ ಜರುಗಿದೆ, ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.



