ಬೆಂಗಳೂರು: ಕೆಆರ್ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೂದಿಗೆರೆ ಫ್ಲೆöÊಓವರ್ ಮೇಲೆ ಮೋಟರ್ ಬೈಕ್ಗೆ ಬೋಲೇರೋ ಕಾರ್ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರೂ ಯುವಕರು ಮೃತಪಟ್ಟಿರುತ್ತಾರೆ. ರಾತ್ರಿ ಒಂದೂವರೆ ಸುಮಾರಿಗೆ ಮೋಟರ್ ಬೈಕ್ ನಲ್ಲಿ ಪುನೀತ್(೨೮) ಮತ್ತು ನಿತಿನ್(೨೭) ರವರುಗಳು ಬೈಕ್ನಲ್ಲಿ ಹೋಗುವಾಗ ಅಪಘಾತ ಕ್ಕೀಡಾಗಿ ಮೃತಪಟ್ಟಿರುತ್ತಾರೆ. ಕೆಆರ್ ಪುರಂ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. ಮತ್ತೊಂದು ಅಪಘಾತ ಪ್ರಕರಣ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ತರಬನಹಳ್ಳಿ ಬಳಿ ಮೋಟರ್ ಬೈಕ್ ಬೋಲೇರೋ ಕಾರ್ ಪರಸ್ಪರ ಡಿಕ್ಕಿಯಾಗಿ ಪುನೀತ್ ೩೫ ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾನೆ. ರಾತ್ರಿ ೨ ಗಂಟೆ ಸುಮಾರಿಗೆ ಅಪಘಾತ ಸಂಭವಿಸಿರುತ್ತದೆ. ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. ಮತ್ತೊಂದು ಅಪಘಾತ ಪ್ರಕರಣ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಕೋಗಿಲು ಕ್ರಾಸ್ ಬಳಿ ಲಾರಿ ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ವಿಕಾಸ್(೨೩) ಎಂಬ ವ್ಯಕ್ತಿ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿರುತ್ತಾನೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



