ಬೆಂಗಳೂರು: ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಗ್ನಿ ಅಥವಾ ಗ್ಯಾಸ್ ಸಿಲಿಂಡರ್ ನಿಂದ ಮೂರು ಜನ ಮೃತಪಟ್ಟಿರುತ್ತಾರೆ.
ಜೆಪಿ ನಗರದ ಮೂರನೇ ಹಂತದ ಆರನೇ ಮುಖ್ಯ ರಸ್ತೆ ಐಕ್ಯ ಶಾಲೆ ಬಳಿ ಈ ದುರ್ಘಟನೆ ಇಂದು ಬೆಳಿಗ್ಗೆ ಸುಮಾರು 8:30 ಗಂಟೆಗೆ ಸಂಭವಿಸಿದೆ.
ಸುಕನ್ಯಾ(53) ನಿಶ್ಚಿತ್ (28) ಮತ್ತು ನಿಖಿಲ್(28) ಮೃತರಾಗಿರುತ್ತಾರೆ. ಇವರುಗಳು ಮಲಗುವ ಕೋಣೆಗಳಲ್ಲಿ ಈ ಘಟನೆ ಸಂಭವಿಸಿರುತ್ತದೆ.ಸುಕನ್ಯಾ ಗಂಡ ಜಯರಾಮ್ ರವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ನಿಶ್ಚಿತ್ ಮತ್ತು ನಿಕಿತ್ ಇಬ್ಬರು ಅವಳಿ ಜವಳಿ ಮಕ್ಕಳಾಗಿರುತ್ತಾರೆ.
ನಿಶ್ಚಿತ್ತಿಗೆ ಕೋವಿಡ್ ಸಮಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದು ಸೊಂಟದಲ್ಲಿ ಬಲ ಕುಂದಿದ್ದರಿಂದ ಗೋಡೆ ಹಿಡಿದು ನಡೆದಾಡುತ್ತಿದ್ದನು ಎಂದು ತಿಳಿಸಿರುತ್ತಾರೆ. ಹಾಗೂ ಸಾಲದ ಸುಳಿಯಲ್ಲಿ ಸಹ ಸಿಕ್ಕಿ ಪೇಚಾಟ ಪಡುತ್ತಿದ್ದರು ಎಂದು ತಿಳಿಸಿದರು.
ಜಯರಾಮ್ ರವರು ಖಾಸಗಿ ಕಂಪನಿಯೊಂದನ್ನು ನಡೆಸುತ್ತಿರುತ್ತಿರುತ್ತಾರೆ ಎಂದು ಜೆಪಿ ನಗರ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ.